Bengaluru : ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ನಾಲ್ವರು ಅಂದರ್
ಬೆಂಗಳೂರು : ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ನಾಲ್ವರನ್ನ ಬಂಧಿಸಸುವಲ್ಲಿ ಯಲಹಂಕ ಪೊಲೀಸರು ಯಶಸ್ವಿಯಾಗಿದ್ದಾರೆ. ಇಬ್ಬರು ವಿದೇಶಿ ಪ್ರಜೆಗಳಾಗಿದ್ದು , ಓರ್ವ ಮಾದಕ ವ್ಯಸನಿ ಸೇರಿದಂತೆ ನಾಲ್ವರು ಅರೆಸ್ಟ್ ಆಗಿದ್ದಾರೆ..
ಉಡೇ ಉಡೇ ಊಜಾ (36),ಎಕೆಚುಕ್ವು ಡೇನಿಯಲ್(39), ತಸ್ಲೀಂ(20), ಮೊಹಮ್ಮದ್ ಉಮರ್ ಮುಕ್ತಿಯಾರ್(23) ಬಂಧಿತ ಆರೋಪಿಗಳಾಗಿದ್ದಾರೆ..
ಈ ಆರೋಪಿಗಳು ದೆಹಲಿಯಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತರ ಪೈಕಿ ಇಬ್ಬರು ವಿದೇಶಿ ಪ್ರಜೆಗಳಾಗಿದ್ದು , ಈ ಹಿಂದೆ ಹಲವು ಪ್ರಕರಣಗಳಿಗೆ ವಬೇಕಾಗಿದ್ದ ಆರೋಪಿಗಳಾಗಿದ್ಧಾರೆ..
ಬಂಧಿತರಿಂದ 2.85 ಲಕ್ಷ ಮೌಲ್ಯದ 105 ಗ್ರಾಂ ಎಂಡಿಎಂಎ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









