ಕಣ್ಣಾಮುಚ್ಚಾಲೆ ಆಟವಾಡೋಣ ಎಂದು ಉದ್ಯಮಿಯೊಬ್ಬರ 6 ವರ್ಷದ ಮಗನನ್ನ ಯಾಮಾರಿಸಿ ಆತನ ಬಳಿಯಿದ್ದ ಚಿನ್ನಾಭರಣಗಳನ್ನ ಕದ್ದು ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ಬೆಂಗಳೂರಿನ ಗೋವಿಂದರಾಜನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ..
ಚಿನ್ನಾಭರಣಗಳನ್ನ ಕದ್ದು ಬೈಕ್ ನಲ್ಲಿ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಉದ್ಯಮಿ ರಾಘವೇಂದ್ರ ಎಂಬುವವರ ಮಗನ ಬಳಿಯಿಂದ ಆಭರಣಗಳನ್ನ ದೋಚಲಾಗಿದೆ. ಕುಟುಂಬದ ಜೊತೆಗೆ ಮಾಗಡಿ ರಸ್ತೆಯ ಸರಸ್ವತಿ ಕನ್ವೆನ್ಷನ್ ಹಾಲ್ ಬಳಿ ಸಂಬಂಧಿಕರ ಮದುವಿಗೆ ಬಂದಂತಹ ಸಂದರ್ಭದಲ್ಲಿ ಈ ಘಟನೆ ನಡೆದಿದೆ..
ಸದ್ಯ ಈ ಸಂಬಂಧ ರಾಘವೇಂದ್ರ ಅವರು ಗೋವಿಂದರಾಜನಗರ ಠಾಣೆಗೆ ದೂರು ನೀಡಿದ್ದಾರೆ..
ರಾಘವೇಂದ್ರ ಅವರ ಮಗನ ಮೇಲಿದ್ದ ಒಟ್ಟಾರೆ 79 ಗ್ರಾಂ ಚಿನ್ನವನ್ನ ಕಳ್ಳರು ಕದ್ದು ಪರಾರಿಯಾಗಿದ್ದಾರೆ..
ಚಿನ್ನದ ಸರ , ಉಂಗುರಗಳನ್ನ ಕದ್ದಿದ್ದಾರೆ.. ಗೋವಿಂದರಾಜನಗರ ಠಾಣೆಯಲ್ಲಿ ಈ ಸಂಬಂಧಶ ದೂರು ದಾಖಲಿಸಿಕೊಂಡಿರುವ ಪೊಲೀಸರು ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ..