ಬೆಂಗಳೂರು : ಯುವಕನೊಬ್ಬನ ಮೇಲೆ ಸಂಚಾರಿ ಪೊಲೀಸರು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.. ಇಂಟರ್ ವ್ಯೂವ್ ಮುಗಿಸಿಕೊಂಡು ಬರುತ್ತಿದ್ದ ಯುವಕನ ನಡು ರಸ್ತೆಯಲ್ಲಿ ನಿಲ್ಲಿಸಿ ಹಲ್ಲೆ ಶಿವಾಜಿನಗರ ಸಂಚಾರಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ..
ನಿಯಮ ಉಲ್ಲಂಘನೆ ಮಾಡಿರುವ ಹಿನ್ನಲೆ ದಂಡ ಕಟ್ಟಲು ಸೂಚನೆ ನೀಡಿದ್ದರು ಎನ್ನಲಾಗಿದೆ.. ಆದ್ರೆ ಹಣ ಇಲ್ಲ ಸಂಬಳ ಬಂದ ತಕ್ಷಣ ದಂಡ ಪಾವತಿ ಮಾಡುತ್ತೇನೆ ಎಂದು ಯುಕ ಹೇಳಿಕೊಂಡಿದ್ದನಂತೆ..
ಕೋರ್ಟ್ ನಲ್ಲಿ ಹೋಗಿ ಪಾವತಿ ಮಾಡುತ್ತೇನೆ ಎಂದು ಮನವಿ ಮಾಡಿದ್ದನಂತೆ.. ಆದ್ರೆ ಇವಾಗ ಒಂದು ಸಾವಿರ ಕಟ್ಟಿ ಹೋಗು ಎಂದು ಪೊಲೀಸರು ತಿಳಿಸಿದ್ದರು ಎಂದಾಗ ಹಣ ಇಲ್ಲ, ಸಂಬಳ ಬಂದಾಗ ಕಟ್ಟುವೆ ಎಂದಿದ್ದಕ್ಕೆ ಕೋಪಗೊಂಡ ಶಿವಾಜಿನಗರ ಸಂಚಾರಿ ಪೊಲೀಸರು ಹಲ್ಲೆ ನಡೆಸಿರೋದಾಗಿ ಯುವಕ ಹೇಳಿಕೊಂಡಿದ್ದಾನೆ.. ಅಲ್ಲದೇ ಆತನ ಕುತ್ತಿಗೆ ಮೇಲೆ ಗಾಯವಾಗಿದೆ..
ಅಲ್ಲದೇ ಯುವಕನ ಹೆಲ್ಮಟ್ ತೆಗೆದು ಪೊಲೀಸರು ಎಸೆದಿರೋದಾಗಿ ಗೊತ್ತಾಗಿದೆ.. ಹಲ್ಲೆ ಮಾಡಲು ಶುರು ಮಾಡುವುದನ್ನ ಯುವಕ ವಿಡಿಯೊ ಮಾಡಿದಕ್ಕೆ ಸಂಚಾರಿ ಪೊಲೀಸರು ಅವಾಚ್ಯ ಶಬ್ದಗಳಿಂದ ಬೆದರಿಕೆ ಹಾಕಿದ್ದಾರೆ.. ಸಬ್ ಇನ್ಸ್ಪೆಕ್ಟರ್ ಒಬ್ಬರು ಹಲ್ಲೆ ಮಾಡಿರೋದು ತಿಳಿದುಬಂದಿದೆ..
ಯುವಕನಿಗೆ ಬೆದರಿಕೆ ಹಾಕಿ ನನ್ನದೆ ತಪ್ಪು ಎಂದು ಮುಚ್ಚಳಿಕೆ ಬರೆಸಿಕೊಂಡು ಪೊಲೀಸರು ಕಳಿಸಿದ್ಧಾರೆ.. ಬಳಿಕ ಯುವಕ ಮಾಡಿದ ವಿಡಿಯೊಗಳನ್ನ ಪೊಲೀಸರು ಡಿಲಿಟ್ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ..








