ಬೆಳಗಾವಿ : ಬೆಂಗಳೂರು ನಗರದ ಡಿ.ಜೆ.ಹಳ್ಳಿ, ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣ ರಾಜ್ಯದಾದ್ಯಂತ ಭಾರಿ ಸದ್ದು ಮಾಡುತ್ತಿದ್ದು, ಈ ಬಗ್ಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಪ್ರತಿಕ್ರಿಯಿಸಿದ್ದು, ಇದು ದೇಶದ್ರೋಹಿಗಳ ಕೃತ್ಯ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಕೆ.ಜಿ.ಹಳ್ಳಿ ಗಲಭೆ ಘಟನೆ ವ್ಯವಸ್ಥಿತವಾದ ಸಂಚು. ಶಾಸಕರ ಮನೆ, ಪೊಲೀಸ್ ಠಾಣೆ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಇದು ದೇಶದ್ರೋಹಿಗಳ ಕೃತ್ಯವಾಗಿದ್ದು, ಪೊಲೀಸರು ಶೂಟ್ ಅಂಡ್ ಸೈಟ್ ಮಾಡಲಿ ಎಂದು ಹೇಳಿಕೆ ನೀಡಿದ್ದಾರೆ.
ಕೆಲವು ದುಷ್ಠ ಶಕ್ತಿಗಳು ರಾಜ್ಯ ಬಿಜೆಪಿ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ತೋರಿಸಲು ಯತ್ನಿಸಿವೆ ಎಂದು ಆರೋಪಿಸಿ ಸಚಿವರು, ಪತ್ರಕರ್ತರು, ಅಮಾಯಕರ ಮೇಲೂ ಹಲ್ಲೆ ನಡೆಸಿದ್ದಾರೆ. ಈ ಹಿಂದೆ ರೈಲಿಗೆ ಬೆಂಕಿ ಹಚ್ಚಿದಾಗ ಪೊಲೀಸರಿಗೆ ಶೂಟ್ ಅಂಡ್ ಸೈಟ್ ಮಾಡಲು ನಾನೇ ಹೇಳಿದ್ದೆ. ಈಗಲೂ ಬೆಂಗಳೂರಿನಲ್ಲಿ ಬೆಂಕಿ ಹಚ್ಚಿದವರಿಗೆ ಪೊಲೀಸರು ಶೂಟ್ ಆಂಡ್ ಸೈಟ್ ಮಾಡಲಿ ಎಂದು ಗುಡುಗಿದರು.