Besharam rang : ದೀಪಿಕಾ ಪಡುಕೋಣೆ ಪರ ಬ್ಯಾಟ್ ಬೀಸಿದ ರಮ್ಯಾ…..
ಒಂದೆಡೆ ಕಿಂಗ್ ಖಾನ್ ಶಾರುಖ್ ಖಾನ್ ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಕೇಸರಿ ಬಿಕಿನಿ ತೊಟ್ಟಿರುವುದು ವಿವಾದ ಸೃಷ್ಟಿಸಿದೆ.. ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದು , ಹಾಡನ್ನ ವಿರೋಧಿಸುತ್ತಿದ್ದಾರೆ.
ಮತ್ತೊಂದೆಡೆ ಚೇತನ್ ಅಹಿಂಸಾ , ಅನುರಾಗ್ ಕಶ್ಯಪ್ , ಪ್ರಕಾಶ್ ರಾಜ್ ನಂತಹ ನಟರು ದೀಪಿಕಾ ಪರ ಮಾತನಾಡುತ್ತಿದ್ದಾರೆ.. ಇದೀಗ ಇವರದ್ದೇ ಸಾಲಿಗೆ ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಸೇರಿಕೊಂಡಿದ್ದಾರೆ.
ದೀಪಿಕಾ ಪರ ಬ್ಯಾಟ್ ಬೀಸಿದ್ದಾರೆ.. ಟ್ವೀಟ್ ಮಾಡಿರೋ ರಮ್ಯಾ , ಆಯ್ಕೆಯ ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕಾಗಿದೆ. ಮಹಿಳೆಯರು ತಾಯಿ ದುರ್ಗೆಯ ಮೂರ್ತರೂಪವಾಗಿದ್ದಾರೆ. ಸ್ತ್ರೀದ್ವೇಷವು ನಾವು ಹೋರಾಡಬೇಕಾದ ದುಷ್ಟತನವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸ್ತ್ರೀ ದ್ವೇಷಿಗಳ ವಿರುದ್ಧ ರಮ್ಯಾ ಕಿಡಿಕಾರಿದ್ದಾರೆ.
ಡಿವೋರ್ಸ್ ವಿಚಾರಕ್ಕೆ ಸಮಂತಾ ಟ್ರೋಲ್, ತಮ್ಮ ಅಭಿಪ್ರಾಯ ಹೇಳಿದ್ದಕ್ಕೆ ಸಾಯಿಪಲ್ಲವಿ, ಪ್ರೀತಿಸಿ ಬೇರೆಯಾಗಿದ್ದಕ್ಕೆ ರಶ್ಮಿಕಾ, ಬಟ್ಟೆ ವಿಚಾರಕ್ಕೆ ದೀಪಿಕಾರನ್ನು ಟ್ರೋಲ್ ಮಾಡಲಾಗಿದೆ. ಆಯ್ಕೆಯ ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕು ಎಂದು ಹೇಳಿದ್ದಾರೆ.
Besharam Rang: Ramya Stand With Deepika Padukone