‘ಬೇಷರಂ ರಂಗ್’ ಹಾಡು ನೋಡಲು ತುಂಬಾ ಅಸಭ್ಯವಾಗಿದೆ – ಮುಖೇಶ್ ಖನ್ನಾ (ಶಕ್ತಿಮಾನ್)
‘ಪಠಾಣ್’ ಸಿನಿಮಾದ ‘ಬೇಷರಂ ರಂಗ್’ ಹಲವು ಕಾರಣಗಳಿಂದಾಗಿ ಸದ್ದು ಮಾಡುತ್ತಿದೆ. ಹಾಡಿನಲ್ಲಿ ದೀಪಿಕಾ ಪಡುಕೋಣೆ ಬಿಕಿನಿ ವಸ್ತ್ರ ವಿನ್ಯಾಸಕ್ಕೆ ಈಗಾಗಲೇ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಬಾಲಿವುಡ್ ಹಿರಿಯ ನಟ ಮುಖೇಶ್ ಖನ್ನಾ (ಶಕ್ತಿಮಾನ್) ಈ ಹಾಡನ್ನ ಟೀಕಿಸಿ ವ್ಯಂಗ್ಯವಾಡಿದ್ದಾರೆ.
‘ಬೇಷರಂ ರಂಗ್’ ಹಾಡು ನೋಡಲು ತುಂಬಾ ಅಸಭ್ಯವಾಗಿದೆ. ಇದರಿಂದ ಬೇರೆಯವರ ಭಾವನೆ ಕೆರಳಿಸಬಹುದು. ಇಂತಹ ಹಾಡಿಗೆ ಸೆನ್ಸಾರ್ ಮಂಡಳಿ ಅನುಮತಿ ನೀಡಿದ್ದು ಹೇಗೆ ? ಅಷ್ಟರಮಟ್ಟಿಗೆ ”ಸಿನಿಮಾ ಉದ್ಯಮ ದಾರಿ ತಪ್ಪಿದೆ ಎಂದು ಮುಖೇಶ್ ಖನ್ನಾ ತಿಳಿಸಿದ್ದಾರೆ.
ಸಿನಿಮಾಗಳಲ್ಲಿ ಅಶ್ಲೀಲತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗ ಹೀರೋಯಿನ್ ಗಳನ್ನು ಕಡಿಮೆ ಬಟ್ಟೆಯಲ್ಲಿ ತೋರಿಸುತ್ತಿರುವ ಮೇಕರ್ ಗಳಿಗೆ ಮುಂದೆ ಅವರನ್ನು ಬೆತ್ತಲೆಯಾಗಿ ತೋರಿಸುವ ಅವಕಾಶ ಸಿಕ್ಕಿದೆ. ಅಂತಹ ವಿಷಯಗಳನ್ನು ಒಪ್ಪಿಕೊಳ್ಳಲು ನಾವು ಸ್ಪೇನ್ ಅಥವಾ ಸ್ವೀಡನ್ ಅಲ್ಲ. ಯಾರ ವೈಯಕ್ತಿಕ ಭಾವನೆಗಳಿಗೆ ಮತ್ತು ನಂಬಿಕೆಗಳಿಗೆ ಧಕ್ಕೆಯಾಗದಂತೆ ಚಿತ್ರಗಳು ಪ್ರದರ್ಶನವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಸೆನ್ಸಾರ್ ಮಂಡಳಿಯ ಮೇಲಿದೆ. ಇಂದಿನ ಯುವಕರನ್ನು ದಾರಿ ತಪ್ಪಿಸುವ ಚಿತ್ರಗಳಿಗೆ ಸೆನ್ಸಾರ್ ಮಂಡಳಿ ಅನುಮತಿ ನೀಡಬಾರದು. ಈ ಹಾಡಿನಲ್ಲಿ ಇತರರನ್ನು ಕೆರಳಿಸುವ ಈ ರೀತಿಯ ಬಟ್ಟೆಯನ್ನು ಹೇಗೆ ಒಪ್ಪುತ್ತೀರಿ’ ಎಂದು ಮುಖೇಶ್ ಖನ್ನಾ ಆಕ್ರೋಶ ವ್ಯಕ್ತಪಡಿಸಿದರು.
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಚಿತ್ರದ ‘ಬೇಷರಂ ರಂಗ್’ ಹಾಡಿಗೆ ದೇಶಾದ್ಯಂತ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಹಾಡಿನಲ್ಲಿ ದೀಪಿಕಾ ಡ್ರೆಸ್ ತುಂಬಾ ಕಮ್ಮಿಯಾಗಿರುವುದರಿಂದ ಈ ಹಾಡನ್ನು ತೆಗೆದುಹಾಕಬೇಕು ಮತ್ತು ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಹಲವು ಮುಖಂಡರು ಒತ್ತಾಯಿಸಿದ್ದಾರೆ.
‘Besharam Rang’ song is very vulgar – Mukesh Khanna (Shaktiman)








