ದೇಶದ ಅತ್ಯುನ್ನತ ಮಿಲಿಟರಿ ಅಕಾಡೆಮಿ NDA..!!

1 min read

ದೇಶದ ಅತ್ಯುನ್ನತ ಮಿಲಿಟರಿ ಅಕಾಡೆಮಿ NDA..!!

ಸೇನೆಗೆ ಸೇರುವುದು ಬಹುತೇಕರ ಜೀವಮಾನದ ಕನಸು. ಈ ಕನಸು‌ ನನಸಾಗಿಸಿಕೊಳ್ಳಲು ಚಿಕ್ಕಂದಿನಿಂದಲೇ ತಯಾರಿ ನಡೆಸಿ ಸೇನೆ ಸೇರಿದ ಅದೆಷ್ಟೋ ಧೀರರು ನಮ್ಮ ನಡುವಿದ್ದಾರೆ. ಅದರಲ್ಲೂ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಸೇರುವುದು ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಒಂದು ಎಂಬಂತೆ ತಯಾರಿ‌ ನಡೆಸುವವರ ಸಂಖ್ಯೆಗೆ ಕಡಿಮೆ‌ ಇಲ್ಲ.

ಅಸಲಿಗೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಎಂದರೇನು? ಅಲ್ಲಿ ಪ್ರವೇಶ ಪಡೆಯಲು‌ ಇರುವ‌ ಮಾನದಂಡಗಳೇನು? ಅಲ್ಲಿ ಸೇರಿದ ಬಳಿಕ ತರಬೇತಿ ಹೇಗಿರುತ್ತದೆ ಎಂಬುದು ಬಹುತೇಕರಿಗೆ ತಿಳಿಯದು. ಮಹಾರಾಷ್ಟ್ರದ ಪುಣೆ ಬಳಿಯ ಖಡಕವಾಸ್ಲಾ‌ದಲ್ಲಿರುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಯಲ್ಲಿ ಕಠಿಣ ಮಿಲಿಟರಿ ತರಬೇತಿಯನ್ನು ನೀಡಲಾಗುತ್ತದೆ.

ಜಾಯಿಂಟ್ ಸರ್ವಿಸಸ್ ವಿಂಗ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ಸಂಸ್ಥೆಗೆ ೧೯೫೪ ರಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಎಂದು‌ ಮರುನಾಮಕರಣಗೊಳಿಸಲಾಯಿತು. ಭಾರತದ ಸಶಸ್ತ್ರ ಪಡೆಗಳ ಭಾಗಗಳಾದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಸೇರುವವರಿಗೆ ಒಂದೇ ಸೂರಿನಡಿ ಉತ್ತಮ‌ ತರಬೇತಿ ನೀಡುವುದು ಈ ಸಂಸ್ಥೆಯ ಆರಂಭಕ್ಕೆ ನಾಂದಿಯಾಗಿತ್ತು.‌

ಅಕಾಡೆಮಿಯು ಪ್ರಾರಂಭವಾದಾಗಿನಿಂದ ಪ್ರತಿ ಪ್ರಮುಖ ಸಂಘರ್ಷಗಳಲ್ಲಿ ಭಾರತೀಯ ಸೈನ್ಯವನ್ನು ಕಾರ್ಯಾಚರಣೆಗೆ ಕರೆದಾಗಲೆಲ್ಲಾ ಎನ್‌ಡಿಎ ಹಳೆಯ ವಿದ್ಯಾರ್ಥಿಗಳು ಯುದ್ಧದಲ್ಲಿ ಮಂಚೂಣಿಯಲ್ಲಿದ್ದು ಹೋರಾಡಿದ್ದಾರೆ.

ಪೂರ್ವ ಆಫ್ರಿಕಾದಲ್ಲಿನ ಕಾರ್ಯಾಚರಣೆಯ ಸಂದರ್ಭದಲ್ಲಿ ಸೂಡಾನ್ ಯುದ್ಧಕ್ಷೇತ್ರದಲ್ಲಿ ಪ್ರಾಣತ್ಯಾಗ ಮಾಡಿದ ಭಾರತೀಯ ಸೈನಿಕರ ಗೌರವಾರ್ಥವಾಗಿ ಎನ್‌ಡಿಎ ನ ಕಾರ್ಯನಿರ್ವಹಣಾ ಮುಖ್ಯಕೇಂದ್ರಕ್ಕೆ ಸೂಡಾನ್ ಬ್ಲಾಕ್ ಎಂದು ಹೆಸರಿಡಲಾಗಿದೆ. ಎನ್‌ಡಿಎಗೆ ಅರ್ಜಿ ಸಲ್ಲಿಸಿದವರನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಸಾಮಾನ್ಯ ಕೌಶಲ್ಯ, ಮನೋವೈಜ್ಞಾನಿಕ ಪರೀಕ್ಷೆ, ತಂಡ ಕೌಶಲ್ಯಗಳು ಜೊತೆಗೆ ದೈಹಿಕ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಒಳಗೊಂಡ ಸಂದರ್ಶಗಳು ಜೊತೆಗೆ ವೈದ್ಯಕೀಯ ಪರೀಕ್ಷೆಗಳನ್ನೂ ನಡೆಸಲಾಗುತ್ತದೆ. ಪ್ರತಿ ಸೆಮಿಸ್ಟರ್‌ಗೆ ಅಕಾಡೆಮಿಗೆ ಸುಮಾರು 300-350 ಕೆಡೆಟ್‌ಗಳನ್ನು ತೆಗೆದುಕೊಳ್ಳಲಾಗುತ್ತದೆ. ವಾಯು ಸೇನೆಗೆ ಸುಮಾರು 40 ಕೆಡೆಟ್‌ಗಳು, ನೌಕಾ ಸೇನೆಗೆ 50 ಮತ್ತು ಉಳಿದವರನ್ನು ಭೂಸೇನೆಗೆ ತೆಗೆದುಕೊಳ್ಳಲಾಗುತ್ತದೆ.

ಕೆಡೆಟ್‌ಗಳಿಗೆ ಮೂರು ವರ್ಷಗಳ ಅಧ್ಯಯನದ ನಂತರ ಬ್ಯಾಕಲರಿಯೇಟ್ ಪದವಿ ಅಥವಾ ಕಲಾ ವಿಭಾಗದ ಪದವಿ ಅಥವಾ ವಿಜ್ಞಾನ ವಿಭಾಗದ ಪದವಿ ಪಡೆಯುತ್ತಾರೆ.
ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಎಲ್ಲಾ ಆರು ಸೆಮಿಸ್ಟರ್‌ಗಳ ಸಂದರ್ಭದಲ್ಲಿ ಕೆಡೆಟ್‌ಗಳಿಗೆ ಕಟ್ಟುನಿಟ್ಟಿನ ದೈಹಿಕ ತರಬೇತಿಯು ಕಡ್ಡಾಯವಾಗಿದೆ.

ಮುಂಬಯಿ ಭಯೋತ್ಪಾದಕ ದಾಳಿಯ ವೇಳೆ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ವಿದ್ಯಾರ್ಥಿ. ಅಷ್ಟೇ ಅಲ್ಲದೇ ಇಲ್ಲಿ‌ಂದ ತೇರ್ಗಡೆಯಾದ ಅದೆಷ್ಟೋ ಶೂರರು ಹತ್ತು ಹಲವು ಶೌರ್ಯ ಪ್ರಶಸ್ತಿಗಳನ್ನು ಗಳಿಸುವುದರ ಜೊತೆಗೆ ಸಶಸ್ತ್ರ ಸೇನೆಗಳಲ್ಲಿ ಅತ್ಯುಚ್ಛ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಇಂಥ ಧೀರರನ್ನು ದೇಶಕ್ಕೆ ಕೊಡಿಗೆ ನೀಡುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಭಾರತದ ಅತ್ಯುತ್ತಮ ಮಿಲಿಟರಿ ಸಂಸ್ಥೆ.

 

ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.corona cases

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd