ಅಕ್ರಮವಾಗಿ ಬೀಟೆ ನಾಟಾ ಸಾಗಾಟ : ಇಬ್ಬರ ಬಂಧನ (madikeri)
ಮಡಿಕೇರಿ : ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನ ಸಾಗಿಸುತ್ತಿದ್ದ ಇಬ್ಬರನ್ನ ಕುಶಾಲನಗರದಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನ ಸಿದ್ದಾಪುರದ ಇರ್ಷಾದ್ ಹಾಗೂ ಇಂಜಿಲಗೆರೆಯ ಮಣಿ ಎಂದು ಗುರುತಿಸಲಾಗಿದ್ದು, ಇವರು ಕಾಫಿ ಸಿಪ್ಪೆ ಹಾಗೂ ಭತ್ತದ ಹೊಟ್ಟಿನ ಮೂಟೆಗಳ ಅಡಿಯಲ್ಲಿ ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನು ಇಟ್ಟು ಸಾಗಿಸುತ್ತಿದ್ದರು.
ಸದ್ಯ ಬಂಧಿತರಿಂದ ಅರಣ್ಯ ಇಲಾಖೆ ಸಿಬ್ಬಂದಿ, ಸುಮಾರು 30 ಲಕ್ಷ ರೂ. ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.
ಲಾರಿಯಲ್ಲಿ ಬೀಟೆ ಮರದ ನಾಟಾಗಳನ್ನ ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.
ಈ ವೇಳೆ ಕಾಫಿ ಸಿಪ್ಪೆ ಮತ್ತು ಭತ್ತದ ಹೊಟ್ಟಿನ ಮೂಟೆಗಳ ಕೆಳಗೆ ಮಧ್ಯೆ ಬಚ್ಚಿಟ್ಟಿದ್ದ ಸುಮಾರು 15 ಬೀಟೆ ನಾಟಾಗಳು ಪತ್ತೆಯಾಗಿವೆ.
ಈ ಬಗ್ಗೆ ಕುಶಾಲನಗರದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.