Better.com : ಮತ್ತೆ 4000 ಉದ್ಯೋಗಿಗಳನ್ನ ಕೆಲಸದಿಂದ ತೆಗೆಯುವ ನಿರ್ಧಾರದಲ್ಲಿ Better.com..??
3 ತಿಂಗಳ ಹಿಂದೆ ವಿಶ್ವಾದ್ಯಂತ ಬ್ರಾಂಚ್ ಗಳನ್ನ ಹೊಂದಿರುವ ಬೆಟರ್ ಡಾಟ್ ಕಾಂ ಕಂಪನಿ 900 ಉದ್ಯೋಗಿಗಳನ್ನ ಕೆಲಸದಿಂದ ವಜಾಗೊಳಿಸಿತ್ತು.. ಕಂಪನಿಯ ಸಿಯಿಒ ವಿಶಾಲ್ ಗಾರ್ಗ್ ಕಂಪನಿಯ ಜೂಮ್ ವೀಡಿಯೋ ಕಾಲ್ ಮೀಟಿಂಗ್‌ನಲ್ಲಿ ಉದ್ಯೋಗಿಗಳನ್ನ ವಜಾಗೊಳಿಸಿದ್ದರು,.. ಈ ಸುದ್ದಿ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗಿತ್ತು.. ಆಕ್ರೋಶ ವ್ಯಕ್ತವಾಗಿತ್ತು..
ಇದೀಗ ಮತ್ತೆ Better.com ಕಂಪನಿ ಒಟ್ಟಾರೆ 4000 ಸಾವಿರ ಉದ್ಯೋಗಿಗಳ ಕೆಲಸಕ್ಕೆ ಕತ್ತರಿ ಹಾಕಲು ಮುಂದಾಗಿದೆ ಎನ್ನಲಾಗ್ತಿದೆ..
ಭಾರತ ಹಾಗೂ ಅಮೆರಿಕ ಸೇರಿದಂತೆ ವಿಶ್ವದಾದ್ಯಂತ 8 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಬೆಟರ್ ಡಾಟ್ ಕಾಂ ಕಂಪನಿ ಮತ್ತೆ ತಮ್ಮ ಕಂಪನಿ ಉದ್ಯೋಗಿಗಳ ಕೆಲಸ ಕಸಿಯಲಿದೆ ಎನ್ನಲಾಗುತ್ತದೆ. ಅಂದ್ರೆ ಅರ್ಧಕ್ಕರ್ಧ ಉದ್ಯೋಗಿಗಳನ್ನ ಕೆಲಸದಿಂದ ಕಿತ್ತುಹಾಕಬಹುದು ಎನ್ನಲಾಗುತ್ತಿದೆ..








