ಸಿಂಗಾಪುರದಲ್ಲಿ ಶಿಕ್ಷಕರಿಗೆ ತರಬೇತಿ ನೀಡಲು ಮುಂದಾದ ಪಂಜಾಬ್ ಸರ್ಕಾರ….
ಚಂಡೀಗಢ: ಪಂಜಾಬ್ ನ 36 ಸರ್ಕಾರಿ ಶಾಲೆಗಳ ಶಿಕ್ಷಕರು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಫೆಬ್ರವರಿ 4 ರಂದು ಸಿಂಗಾಪುರಕ್ಕೆ ತೆರಳಲಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಗುರುವಾರ ತಿಳಿಸಿದ್ದಾರೆ.
“ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನ ಪರಿವರ್ತಿಸುವುದಾಗಿ ಎಎಪಿ ಮಾತುಕೊಟ್ಟಿತ್ತು. ಶಿಕ್ಷಕರು ಶಿಕ್ಷಣದ ಮಟ್ಟವನ್ನ ಮೇಲಕ್ಕೆತ್ತಬಲ್ಲ ರಾಷ್ಟ್ರ ನಿರ್ಮಾತೃಗಳಾಗಿರುವುದರಿಂದ, ಗುಣಮಟ್ಟದ ತರಬೇತಿಯನ್ನು ಖಾತ್ರಿಪಡಿಸುವ ಮೂಲಕ ಅವರ ಬೋಧನಾ ಕೌಶಲ್ಯವನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.
ಈ ಖಾತರಿಯ ಭಾಗವಾಗಿ 36 ಪ್ರಾಂಶುಪಾಲರು ತರಬೇತಿ ಕಾರ್ಯಕ್ರಮಕ್ಕಾಗಿ ಸಿಂಗಾಪುರಕ್ಕೆ ಪ್ರಯಾಣಿಸುತ್ತಿದ್ದಾರೆ. ಶಿಕ್ಷಕರು ಫೆಬ್ರವರಿ 6-10 ರಿಂದ ಸಿಂಗಾಪುರದಲ್ಲಿ ವೃತ್ತಿಪರ ಶಿಕ್ಷಕರ ತರಬೇತಿ ಸೆಮಿನಾರ್ನಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ಅಧಿಕೃತ ಹೇಳಿಕೆಯ ಪ್ರಕಾರ ತಿಳಿದುಬಂದಿದೆ.
ರಾಜ್ಯದಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಈ ಹಂತದಿಂದ ಪ್ರಯೋಜನ ಪಡೆಯುತ್ತಾರೆ ಏಕೆಂದರೆ ಈ ಪ್ರಾಂಶುಪಾಲರು ತಮ್ಮ ಅನುಭವವನ್ನು ತಮ್ಮ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾರೆ, ಇದು “ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಶಿಕ್ಷಕರ ಪರಿಣತಿ ಮತ್ತು ವೃತ್ತಿಪರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ” ಎಂದು ಭಗವಂತ್ ಮಾನ್ ಹೇಳಿದರು.
Bhagavanth Man : Punjab Government to train teachers in Singapore…








