ದರ್ಗಾದಲ್ಲಿ ಭಜನೆ ಮಾಡಿದ ಹನುಮ ಮಾಲಾಧಾರಿಗಳು
ಗಂಗಾವತಿ: ರಾಜ್ಯದಲ್ಲಿ ಬುಗಿಲೆದ್ದಿರುವ ವಿವಾದಗಳ ನಡುವೆ ಕನಕಗಿರಿ ಪಟ್ಟಣದ ಯಮನೂರಸಾಬ ದರ್ಗಾ ಸಾಮರಸ್ಯೆಗೆ ಸಾಕ್ಷಿಯಾಗಿದೆ.
ಹೌದು ಕನಕಗಿರಿ ಪಟ್ಟಣದ ಯಮನೂರಸಾಬ ದರ್ಗಾದಲ್ಲಿ ಹನುಮ ಮಾಲಾಧಾರಿಗಳು ಭಜನೆ ಮಾಡುವ ಮೂಲಕ ಭಾವೈಕ್ಯತೆಯನ್ನು ಸಾರಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬುಗಿಲೆದ್ದಿರುವ ಹಿಜಾಬ್ , ಹಲಾಲ್ ಇನ್ನೀತರ ವಿವಾದಗಳ ಮಧ್ಯೆ ಇದು ಪ್ರಶಂಸನೀಯವಾಗಿದೆ.
ಇನ್ನೂ ಹನುಮ ಮಾಲಾಧಾರಿಗಳಿಗೆ ದರ್ಗಾದ ವ್ಯವಸ್ಥಾಪಕ ಮಂಡಳಿಯ ಸದಸ್ಯರು ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಿಕೊಟ್ಟು, ಸಾಮರಸ್ಯದ ಸಂದೇಶ ನೀಡಿದ್ದಾರೆ.








