ಶಿವಣ್ಣನ ಅಭಿಮಾನಿಗಳಿಗೆ ಮತ್ತೆ ನಿರಾಸೆ – ಗಣೇಶ ಹಬ್ಬಕ್ಕೂ ರಿಲೀಸ್ ಆಗಲ್ಲ ಭಜರಂಗಿ -2
ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಭಜರಂಗಿ 2 ಸಿನಿಮಾ ಟೀಸರ್ ಹಾಗೂ ಪೋಸ್ಟರ್ ಗಳಿಂದ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ನಡುವೆ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳು ಕಾಯ್ತಿದ್ದು, ಅವರೆಲ್ಲರಿಗೂ ಸಿನಿಮಾ ತಂಡ ಇತ್ತೀಚೆಗೆ ಗುಡ್ ನ್ಯೂಸ್ ಕೊಟ್ಟಿತ್ತು.. ಆದ್ರೆ ಇದೀಗ ಮತ್ತೊಮ್ಮೆ ಶಿವಣ್ಣನ ಅಭಿಮಾನಿಗಳು ಬಾರೀ ನಿರಾಸೆ ಅನುಭವಿಸುವಂತಾಗಿದೆ. ಹೌದು.. ಇನ್ನೇನು ಸಿನಿಮಾ ರಿಲೀಸ್ ಆಗೋದಕ್ಕೆ 10 -12 ದಿನ ಬಾಕಿಯಿದೆ.. ಶಿವಣ್ಣನ ಸಿನಿಮಾವನ್ನ ಬೆಳ್ಳಿ ತೆರ ಮೇಲೆ ಕಣ್ತುಂಬಿಕೊಳ್ಳಬಹುದೆಂದು ದಿನಗಣನೆ ಮಾಡ್ತಿದ್ದ ಅಭಿಮಾನಿಗಳು ಇದೀಗ ಬೇಸರಗೊಂಡಿದ್ದಾರೆ..
ಕಾರಣ ಸಿನಿಮಾ ದಿನಾಂಕ ಮತ್ತೊಮ್ಮೆ ಮುಂದೂಡಿಕೆಯಾಗಿದೆ.. ಹೌದು ಇತ್ತೀಚೆಗೆ ಸಿನಿಮಾತಂಡ ಸಿನಿಮಾ ರಿಲೀಸ್ ದಿನಾಂಕವನ್ನು ಪ್ರಕಟಿಸಿತ್ತು.. ಸೆಪ್ಟೆಂಬರ್ 10 ಅಂದ್ರೆ ಗಣಪತಿ ಹಬ್ಬಕ್ಕೆ ಭಜರಂಗಿ ಬಿಡುಗಡೆ ಕನ್ ಫರ್ಮ್ ಆಗಿತ್ತು. ಆದ್ರೀಗ ಫ್ಯಾನ್ಸ್ ನಿರೀಕ್ಷೆ ಹುಸಿಯಾಗಿದೆ.. ಸಿನಿಮಾ ಸದ್ಯಕ್ಕಂತೂ ರಿಲೀಸ್ ಆಗಲ್ಲ ಎಂಬ ಸುದ್ದಿ ಹೊರಬಿದ್ದಿದೆ. ಈ ಕುರಿತು ನಟ ಶಿವರಾಜ್ ಕುಮಾರ್ ವಿಡಿಯೋ ಮೂಲಕ ಮಾಹಿತಿ ಸ್ಪಷ್ಟಪಡಿಸಿದ್ದಾರೆ. ಹೊರರಾಜ್ಯಗಳಲ್ಲಿ ಕೋವಿಡ್ ಕೇಸ್ ಹೆಚ್ಚಾಗಿದೆ. ವೀಕೆಂಡ್ ಲಾಕ್ಡೌನ್, ನೈಟ್ ಕರ್ಫ್ಯೂ ಬೇರೆ ಇದೆ. ಈ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡುವುದು ನಿರ್ಮಾಪಕರ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಾಗಿ, ಸದ್ಯಕ್ಕೆ ಭಜರಂಗಿ 2 ಆಗುತ್ತಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದರು.
ಥಿಯೇಟರ್ ತುಂಬಾ ಜನ ಇದ್ದಾಗ ಆ ಸಿನಿಮಾ ನೋಡೋಕೆ ಒಂದು ಮಜಾ ಇರುತ್ತೆ. ಈಗಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗ್ತಿಲ್ಲ. ದಯವಿಟ್ಟು ಯಾರೂ ಬೇಸರ ಮಾಡಿಕೊಳ್ಳಬೇಡಿ. ಆದಷ್ಟೂ ಬೇಗ ಬಿಡುಗಡೆ ಮಾಡಲು ನಾವು ಪ್ರಯತ್ನ ಪಡ್ತೇವೆ. ತುಂಬಾ ವಿಳಂಬನೂ ಮಾಡಲ್ಲ. ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಟ್ರೈಲರ್ ರಿಲೀಸ್ ಮಾಡುವಾಗಲೇ ಅದರಲ್ಲಿಯೇ ಹೊಸ ಬಿಡುಗಡೆ ದಿನಾಂಕ ಘೋಷಣೆ ಮಾಡುವುದಾಗಿಯೂ ತಿಳಿಸಿದ್ದಾರೆ. ಅಂದ್ಹಾಗೆ ಭಜರಂಗಿ2 ನಂತರ ಶಿವಣ್ಣ ಇನ್ನೂ ಹಲವಾರು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಲಿದ್ದಾರೆ. ಪ್ರಮುಖವಾಗಿ ಹರ್ಷ ಅವರ ನಿರ್ದೇಶನದಲ್ಲೇ ಮೂಡಿಬರಲಿರುವ ಹೊಸ ಸಿನಿಮಾ ವೇದದಲ್ಲಿ ಶಿವಣ್ಣ ಅಭಿನಯಿಸಲಿದ್ದಾರೆ.








