bhanu athaiyya
ಭಾರತದ ಮೊದಲ ಆಸ್ಕರ್ ಪ್ರಶಸ್ತಿ ವಿಜೇತೆ ಖ್ಯಾತ ವಸ್ತ್ರ ವಿನ್ಯಾಸಕಿ ( 91 ) ಭಾನು ಅಥೈಯಾ ವಿಧಿವಶರಾಗಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಭಾನು ನಿಧನದ ಬಗ್ಗೆ ಪುತ್ರಿ ಮಾಹಿತಿ ಬಹಿರಂಗಪಡಿಸಿದ್ದಾರೆ.
ಇನ್ನೂ ”ಎಂಟು ವರ್ಷಗಳ ಹಿಂದೆ, ಭಾನು ಅವರಿಗೆ ಮೆದುಳಿನಲ್ಲಿ ಗೆಡ್ಡೆಯೊಂದು ಪತ್ತೆಯಾಗಿತ್ತು.
ಕಳೆದ ಮೂರು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಮತ್ತೊಂದು ಕಡೆ ದೇಹ ಪಾರ್ಶ್ವವಾಯುವಿಗೆ ಒಳಗಾಯಿತು.
ಹೀಗಾಗಿ, ಇಂದು ಮುಂಜಾನೆ ಮಲಗಿದ್ದಾಗಲೇ ಇಹಲೋಕ ತ್ಯಜಿಸಿದರು” ಎಂದು ಮಗಳು ರಾಧಿಕಾ ಗುಪ್ತಾ ಮಾಹಿತಿ ನೀಡಿದ್ದಾರೆ.
1956ರ ಸೂಪರ್ ಹಿಟ್ ಚಿತ್ರ ‘ಸಿ.ಐ.ಡಿ’ ಚಿತ್ರದ ಮೂಲಕ ಅಥೈಯಾ ಕಾಸ್ಟ್ಯೂಮ್ ಡಿಸೈನರ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಕರ್ನಾಟಕ – ಆರ್ ಟಿ-ಪಿಸಿಆರ್ ನಲ್ಲಿ ನೆಗೆಟಿವ್ ವರದಿ ಬಂದವರಿಗೆ ಹೊಸ ಪ್ರೋಟೋಕಾಲ್
ಈ ಚಿತ್ರವನ್ನು ಗುರುದತ್ ಅವರು ನಿರ್ಮಿಸಿದ್ದರು. 1990ರಲ್ಲಿ ಲೆಕಿನ್ ಚಿತ್ರಕ್ಕಾಗಿ ಹಾಗೂ 2001 ರ ಅಶುತೋಷ್ ಗೋವಾರಿಕರ್ ನಿರ್ದೇಶನದ ‘ಲಗಾನ್’ ಚಿತ್ರದ ವಸ್ತ್ರ ವಿನ್ಯಾಸಕ್ಕಾಗಿ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
1982 ರಲ್ಲಿ ರಿಚರ್ಡ್ ಅಟೆನ್ಬರೋ ನಿರ್ದೇಶನದ ‘ಗಾಂಧಿ’ ಚಿತ್ರದಲ್ಲಿ ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ಅಕಾಡೆಮಿ ಪ್ರಶಸ್ತಿ ಗೆದ್ದ ಇವರು 2012 ರಲ್ಲಿ ತನ್ನ ಆಸ್ಕರ್ ಪ್ರಶಸ್ತಿಯನ್ನು ಸುರಕ್ಷಿತವಾಗಿಡಲು ಅಕಾಡೆಮಿಗೆ ವಾಪಸ್ ಮಾಡಿದ್ರು.
ಇನ್ನೂ ಸುಮಾರು 50 ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ ಅಥೈಯಾ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
bhanu athaiyya
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel