ಭಾರತ್ ಬಂದ್ | ಹಾವೇರಿಯಲ್ಲಿ ರೈತರಿಬ್ಬರು ಆತ್ಮಹತ್ಯೆಗೆ ಯತ್ನ Bharat Bandh saaksha tv
ಹಾವೇರಿ : ಭಾರತ್ ಬಂದ್ ಪ್ರತಿಭಟನೆ ವೇಳೆಯಲ್ಲಿ ರೈತರಿಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಕೇಂದ್ರದ ಕೃಷಿ ಕಾನೂನಗಳನ್ನು ವಿರೋಧಿ ಕಿಸಾನ್ ಮೋರ್ಚಾ ಭಾರತ್ ಬಂದ್ ಗೆ ಕರೆ ಕೊಟ್ಟಿದೆ.
ಅದರಂತೆ ಹಾವೇರಿಯಲ್ಲೂ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆ ವೇಳೆಯಲ್ಲಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನೇಣು ಹಾಕಿಕೊಳ್ಳಲು ರೈತರು ಮುಂದಾಗಿದ್ದರು.
ಇದನ್ನು ಗಮನಿಸಿದ ಪೊಲೀಸರು ರೈತರನ್ನು ತಡೆದು ಹಗ್ಗವನ್ನು ಕಸಿದುಕೊಂಡಿದ್ದಾರೆ.
ಇನ್ನು ಹಾವೇರಿಯಲ್ಲಿ ರೈತರ ಪ್ರತಿಭಟನೆಗೆ ದಲಿತ ಸಂಘರ್ಷ ಸಮಿತಿ ಸೇರಿದಂತೆ ಅನೇಕ ಸಂಘಸಂಸ್ಥೆಗಳು ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಸಾಥ್ ನೀಡಿದ್ದವು.









