ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ – ಪ್ರಾಜೆಕ್ಟ್ ಎಂಜಿನಿಯರ್ ನೇಮಕಾತಿಗಾಗಿ ಆನ್-ಲೈನ್ ಅರ್ಜಿ ಆಹ್ವಾನ
ಬೆಂಗಳೂರು, ಅಗಸ್ಟ್ 14: ಬೆಂಗಳೂರಿನಲ್ಲಿ ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್), ಪ್ರಾಜೆಕ್ಟ್ ಎಂಜಿನಿಯರ್ (ಮೆಡಿಕಲ್ ಡಿವೈಸಸ್) ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ.
ಒಟ್ಟು 60 ಹುದ್ದೆಗಳಿದ್ದು, ಅಭ್ಯರ್ಥಿಯು ಸಂಬಂಧಿಸಿದ ವಿಭಾಗದಲ್ಲಿ ಅಂಗೀಕೃತ ಸಂಸ್ಥೆ / ವಿಶ್ವವಿದ್ಯಾಲಯದಿಂದ ಪೂರ್ಣಾವಧಿಯ ಬಿಇ / ಬಿಟೆಕ್ / ಬಿಎಸ್ಸಿ ಎಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.
ಗರಿಷ್ಠ ವಯೋಮಿತಿ 28 ವರ್ಷವಾಗಿದ್ದು, ಸೂಕ್ತ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಗಸ್ಟ್ 26 ರ ರೊಳಗಾಗಿ ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ http://bel-india.in ಸಂಪರ್ಕಿಸಬಹುದು.