Bharat jodi yatra: ತಂದೆ ವಿಲಾಸ್ ರಾವ್ ಪೊಟೋ ಹಂಚಿಕೊಂಡ ನಟ ರಿತೇಶ್ ದೇಶ್ ಮುಖ್…
ಯಾತ್ರೆಯಲ್ಲಿ ವಿಲಾಸ್ರಾವ್ ದೇಶಮುಖ್ ಪೋಟೋ – ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ನಟ ರಿತೇಶ
‘ಭಾರತ್ ಜೋಡೋ ಯಾತ್ರೆ’ಯಲ್ಲಿ ಬಾಲಿವುಡ್ ನಟ ರಿತೇಶ್ ದೇಶಮುಖ್ ಅವರ ತಂದೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್ರಾವ್ ದೇಶಮುಖ್ ಅವರ ಫೋಟೊವೊಂದನ್ನ ಅಭಿಮಾನಿ ಪ್ರದರ್ಶಿಸಿದ್ದಾರೆ. ಇದನ್ನ ನಟ ರಿತೀಶ ದೇಶ್ ಮುಖ್ ಖುಷಿಯಿಂದ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ರಿತೇಶ್ ಪತ್ನಿ ಜೆನಿಲಿಯಾ ಕೂಡ ಹಂಚಿಕೊಂಡಿದ್ದಾರೆ.
ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ಯಾತ್ರೆ’ಯಲ್ಲಿ ಬಾಲಿವುಡ್ ನಟರಾದ ಪೂಜಾ ಭಟ್ ಮತ್ತು ಸುಶಾಂತ್ ಸಿಂಗ್ ಭಾಗವಹಿಸಿದ್ದರು. ಪೂಜಾ ಭಟ್ ಅವರು ಹೈದರಾಬಾದ್ನಲ್ಲಿ ರಾಹುಲ್ ಅವರೊಂದಿಗೆ ನಡೆದರೆ, ಮಹಾರಾಷ್ಟ್ರಕ್ಕೆ ಬಂದಿಳಿದ ಸುಶಾಂತ್ ಸಿಂಗ್ ಜೋಡೋ ಯಾತ್ರೆಯನ್ನು ಸೇರಿಕೊಂಡರು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಮಿತ್ ದೇಶಮುಖ್, ರಿತೇಶ್ ದೇಶಮುಖ್ ಅವರ ಸಹೋದರ ಕೂಡ ರಾಜ್ಯದಲ್ಲಿ ಭಾರತ್ ಜೋಡೋವನ್ನು ಸ್ವಾಗತಿಸಿದರು.
ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆ ಮತ್ತು ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಕೂಡ ರಾಹುಲ್ ಅವರ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಸಿದ್ಧಾಂತಗಳು ಭಿನ್ನವಾಗಿದ್ದರೂ ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದೇನೆ ಎಂದು ಆದಿತ್ಯ ಹೇಳಿದರು.
Bharat jodi yatra: Actor Ritesh Desh Mukh shares father Vilas Rao photo…








