ಭಾರತ್ NCAP – ಭಾರತದಲ್ಲೇ ಕಾರು ಕ್ರಾಶ್ ಟೆಸ್ಟ್ ಗೆ ಅನುಮೋದನೆ…
ಭಾರತೀಯ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳನ್ನು ಸುರಕ್ಷತಾ ರೇಟಿಂಗ್‌ಗಾಗಿ ಜಾಗತಿಕ NCAP ಗೆ ಕಳುಹಿಸುವ ಅಗತ್ಯವಿಲ್ಲ. ಭಾರತವು ಶೀಘ್ರದಲ್ಲೇ ತನ್ನದೇ ಆದ ಸುರಕ್ಷತಾ ಸಂಸ್ಥೆಯನ್ನು ಹೊಂದಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಇದರ ಹೆಸರು ಇಂಡಿಯಾ ಎನ್‌ಸಿಎಪಿ. ಈ ಏಜೆನ್ಸಿಯು ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಕಾರ್ಯಕ್ಷಮತೆಯ ಆಧಾರದ ಮೇಲೆ ದೇಶದ ವಾಹನಗಳಿಗೆ 1 ರಿಂದ 5 ಸ್ಟಾರ್ ರೇಟಿಂಗ್ ನೀಡುತ್ತದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇಂಡಿಯಾ ಎನ್‌ಸಿಎಪಿ ಪ್ರಾರಂಭಿಸಲು ಜಿಎಸ್‌ಆರ್ ಅಧಿಸೂಚನೆಯ ಕರಡನ್ನ ಅನುಮೋದಿಸಿದ್ದಾರೆ. ಶುಕ್ರವಾರ ಈ ಕುರಿತು ಮಾಹಿತಿ ನೀಡಿದ ಅವರು, ಕೇಂದ್ರ ಸರ್ಕಾರವು ಇಂಡಿಯಾ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಇಂಡಿಯಾ ಎನ್‌ಸಿಎಪಿ) ವ್ಯವಸ್ಥೆಯನ್ನು ತರಲು ಹೊರಟಿದೆ. ಭಾರತ್ ಎನ್ ಸಿಎಪಿ ಗ್ರಾಹಕ ಕೇಂದ್ರಿತ ವೇದಿಕೆಯಾಗಿ ಕಾರ್ಯನಿರ್ವಹಣೆ ಮಾಡಲಿದ್ದು, ಸ್ಟಾರ್ ರೇಟಿಂಗ್ ಆಧಾರದಲ್ಲಿ ಸುರಕ್ಷಿತ ಕಾರುಗಳ ಖರೀದಿಗೆ ಅನುವು ಮಾಡಿಕೊಡಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.
ಕಾರ್ ಕ್ರಾಶ್ ಟೆಸ್ಟ್ ಅಥವಾ NCAP ಪರೀಕ್ಷೆಯಲ್ಲಿ ಕಡಿಮೆ ಸ್ಟಾರ್ ರೇಟಿಂಗ್ ಹೊಂದಿರುವ ಕಾರುಗಳನ್ನ ಅಪಘಾತದ ಸಮಯದಲ್ಲಿ ಸುರಕ್ಷಿತವೆಂದು ಪರಿಗಣಿಸಲಾಗುವುದಿಲ್ಲ. ಕಾರುಗಳನ್ನ ಪರೀಕ್ಷಿಸಿ 0 ರಿಂದ 5 ವರೆಗೆ ರೇಟ್ ನೀಡಲಾಗುತ್ತದೆ. ಕ್ರ್ಯಾಶ್ ಟೆಸ್ಟ್‌ನಲ್ಲಿ, ವಯಸ್ಕರ ಸುರಕ್ಷತೆ, ಮಕ್ಕಳ ಸುರಕ್ಷತೆ ಸೇರಿದಂತೆ ಹಲವು ವಿಧಗಳಲ್ಲಿ ಕಾರನ್ನು ಪರೀಕ್ಷಿಸಲಾಗುತ್ತದೆ.








