ವಿಷ್ಣು ಪುತ್ಥಳಿ ಧ್ವಂಸ ಅವಮಾನವಲ್ಲ, ಆರ್ಶೀವಾದ : ಭಾರತಿ
ಬೆಂಗಳೂರು : ನಗರದ ಮಾಗಡಿ ರೋಡ್ ಟೋಲ್ ಗೇಟ್ ಬಳಿ ವಿಷ್ಣು ದಾದಾ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು. ಈ ಬಗ್ಗೆ ಸ್ಯಾಂಡಲ್ ಸ್ಟಾರ್ ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಪ್ರತಿಮೆ ಧ್ವಂಸ ಬಗ್ಗೆ ಸಾಹಸಸಿಂಹ ವಿಷ್ಣವರ್ಧನ್ ಪತ್ನಿ ಭಾರತಿ ವಿಷ್ಣವರ್ಧನ್ ಪ್ರತಿಕ್ರಿಯೆ ನೀಡಿದ್ದು, ಡಾ.ವಿಷ್ಣವರ್ಧನ್ ಬಗ್ಗೆ ಮಾತನಾಡುವವರು ಇರ್ಬೇಕು.
ರಾಜ್ಯದಲ್ಲಿ ರಿಯಲ್ ನೈಟ್ ಕರ್ಫ್ಯೂ ಅಗತ್ಯ : ಆರ್.ಅಶೋಕ್
ಹಾಗಿದ್ದಲ್ಲಿ ಮಾತ್ರ ಅವರ ಇರುವಿಕೆ ಗೊತ್ತಾಗುತ್ತೆ. ಪ್ರತಿಮೆ ಧ್ವಂಸವನ್ನ ಅವಮಾನ ಅಂದಕೊಳ್ಳಬಾರದು. ಅದನ್ನ ಆರ್ಶೀವಾದ ಅಂದುಕೊಳ್ಳೋಣ ಎಂದಿದ್ದಾರೆ.
ಪ್ರತಿಮೆ ಧ್ವಂಸ ಪ್ರಕರಣದ ಸಂಬಂಧ ಇಡೀ ಚಿತ್ರರಂಗ ಪ್ರತಿಕ್ರಿಸಿದೆ. ಘಟನೆಗೆ ಸ್ಪಂದಿಸಿದ ಎಲ್ಲರಿಗೂ ಧನ್ಯವಾದ. ಎಲ್ಲರ ಮನಸ್ಸಿನಲ್ಲೂ ವಿಷ್ಣು ಇದ್ದಾರೆ.
ಪುತ್ಥಳಿ ಧ್ವಂಸ ಮಾಡಿದಂತವರಿಗೆ ನಾನು ಏನೂ ಹೇಳುವುದಿಲ್ಲ. ಅಂತವರ ಬಗ್ಗೆ ಏನು ಮಾತನಾಡದೇ ಇರೋದು ಉತ್ತಮ ಎಂದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel