Congress | ಭಾರತೀಯ ಟೆರರಿಸ್ಟ್ ಪಾರ್ಟಿ…. ಕಾಂಗ್ರೆಸ್ ಟ್ವೀಟ್
ಬೆಂಗಳೂರು : ದೇಶದ ಯಾವುದೇ ವಿಧ್ವಂಸಕಾರಿ ಶಕ್ತಿಗಳ ಮೂಲ ಕೆದಕಿದಾಗ ಅಲ್ಲಿ ಬಿಜೆಪಿ, RSSನ ನಂಟು ಇರುತ್ತದೆ ಎಂದು ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ಕಿಡಿಕಾರಿದೆ.
ಭಾನುವಾರ ಜಮ್ಮು ಜಿಲ್ಲೆಯ ರಿಯಾಸಿ ಪ್ರದೇಶದಲ್ಲಿ ಗ್ರಾಮಸ್ಥರೇ ಲಷ್ಕರ್ ಎ ತಯ್ಬಾ ಸಂಘಟನೆಯ ಇಬ್ಬರು ಉಗ್ರರನ್ನು ಸೆರೆ ಹಿಡಿದಿದ್ದಾರೆ.
ಗ್ರಾಮಸ್ಥರು ಸೆರೆ ಹಿಡಿದಿರುವ ಉಗ್ರರನ್ನು ರಜೌರಿ ಜಿಲ್ಲೆಯ ಎಲ್ ಇಟಿ ಕಮಾಂಡರ್ ತಾಲಿಬ್ ಹುಸೇನ್ ಶಾ, ಪೈಜಲ್ ಅಹ್ಮದ್ ದಾರ್ ತುಕಾಸ್ ಎಂದು ಗುರುತಿಸಲಾಗಿದೆ.
ಈ ಪೈಕಿ ತಾಲಿಬ್ ಹುಸೇನ್ ಶಾ ಈ ಹಿಂದೆ ಬಿಜೆಪಿಯ ಜಮ್ಮು ವಿಭಾಗದ ಅಲ್ಪ ಸಂಖ್ಯಾತ ಮೋರ್ಚಾದ ಸೋಶಿಯಲ್ ಮೀಡಿಯಾ ಘಟಕದ ಮುಖ್ಯಸ್ಥನಾಗಿದ್ದ ಎಂದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, “ಭಾರತೀಯ ಟೆರರಿಸ್ಟ್ ಪಾರ್ಟಿ”ಯ ಒಂದೊಂದೇ ಕರಾಳ ಮುಖಗಳು ಹೊರಬರುತ್ತಿವೆ.
ದೇಶದ ಯಾವುದೇ ವಿಧ್ವಂಸಕಾರಿ ಶಕ್ತಿಗಳ ಮೂಲ ಕೆದಕಿದಾಗ ಅಲ್ಲಿ ಬಿಜೆಪಿ, RSSನ ನಂಟು ಇರುತ್ತದೆ.
ಉದಯಪುರದ ಹಂತಕರು, ಕಾಶ್ಮೀರದ ಉಗ್ರರು ಬಿಜೆಪಿಯ ಸದಸ್ಯರೇ ಆಗಿದ್ದಾರೆ.
ಪುಲ್ವಾಮ ದಾಳಿಯ ತನಿಖೆಯನ್ನು ಹಳ್ಳ ಹಿಡಿಸಿದ್ದು ಏಕೆ ಎಂದು ಜನತೆ ಈಗ ಸ್ಪಷ್ಟತೆಗೆ ಬರಬಹುದು ಎಂದು ಬರೆದುಕೊಂಡಿದೆ.