Gehrayiaan : ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಗೆ ದೀಪಿಕಾ ‘ಗೆಹರಾಯಿಯಾ’ ಸಿನಿಮಾ ಯಾಕಿಷ್ಟವಾಗಿಲ್ಲ…???
ದೀಪಿಕಾ ಪಡುಕೋಣೆ ನಟನೆಯ ಗೆಹರಾಯಿಯಾ ಸಿನಿಮಾ ವಿರುದ್ಧ ಬೆಂಗಳೂರಿನ ಮಾಜಿ ಪೊಲೀಸ್ ಕಮೀಷನರ್, ಭಾಸ್ಕರ್ ರಾವ್ ಅವರು ಸೋಷಿಯಲ್ ಮೀಡಿಯಾ ಮೂಲಕ ಅಸಮಾಧಾನ ಹೊರಹಾಕಿದ್ದಾರೆ…
ಹೌದು ಸೋಷಿಯಲ್ ಮೀಡಿಯಾದಲ್ಲಿ ಗೆಹರಾಯಿಯಾ ಹಾಗೂ ದೀಪಿಕಾ ಪಡುಕೋಣೆ ಟ್ರೋಲಿಂಗ್ ಟಾಪಿಕ್ ಆಗಿದ್ದು, ಈ ಸಿನಿಮಾದಿಂದ ಮತ್ತೊಮ್ಮೆ #BoycottBollywood ಟ್ರೆಂಡ್ ಆಗ್ತಿದೆ.. ಒಂದ್ ಕಡೆ ಈ ಸಿನಿಮಾಗೆ ಒಳ್ಳೆ ಪ್ರತಿಕ್ರಿಯೆ ಎಷ್ಟು ಸಿಕ್ಕಿದ್ಯೋ ಅದಕ್ಕಿಂತ ಹೆಚ್ಚು ಈ ಸಿನಿಮಾಗೆ ನೆಗೆಟಿವ್ ರಿವೀವ್ ಗಳೇ ಸಿಗುತ್ತಿದೆ.. ಈ ಸಿನಿಮಾದ ಸೋಲನ್ನು ಸೋಷಿಯಲ್ ಮೀಡಿಯಾದಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದು , ಸಿನಿಮಾವನ್ನು ಫ್ಲಾಪ್ ಎಂದು ಘೋಷಣೆ ಮಾಡಿದ್ದಾರೆ…
ಇತ್ತ ಬಾಲಿವುಡ್ ನ ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ ಸಹ ಪರೋಕ್ಷವಾಗಿ ಸಿನಿಮಾ ವಿರುದ್ಧ ಕಿಡಿಕಾರಿದ್ದರು… ನಾನೂ ಇದೇ ಜಮಾನದವಳೇ , ನನಗೂ ಈಗಿನ ಪೀಳಗೆ ಅರ್ಥವಾಗುತ್ತದೆ… ಆದ್ರೆ ಕಸವನ್ನ ಮಾರಾಟ ಮಾಡಲಾಗುವುದಿಲ್ಲ… ಇಂತಹವುಗಳಿಂದ ಒಂದು ಸಿನಿಮಾ ಹಿಟ್ ಆಗೋದಿಲ್ಲ ಎಂದಿದ್ದರು… ಇದೀಗ ಭಾಸ್ಕರ್ ರಾವ್ ಅವರು ಅಸಮಾಧಾನ ಹೊರಹಾಕಿದ್ದಾರೆ.. ‘ ನಾವು ಸಿನಿಮಾವನ್ನು ನೋಡಲಾರಂಭಿಸಿದ ಕೇವಲ 20 ನಿಮಿಷಕ್ಕೆ ಸಿನಿಮಾ ನೋಡುವುದನ್ನ ನಿಲ್ಲಿಸಿದೆವು. ನಾನು ಬೆಂಗಳೂರಿನ ಹುಡುಗಿ ದೀಪಿಕಾ ಪಡುಕೋಣೆ ಅಭಿಮಾನಿ… ದೀಪಿಕಾ ತಮ್ಮ ಸಾಧನೆ ಹಾಗೂ ದಿಟ್ಟತನದಿಂದ ಮಿಲಿಯನ್ ಗಟ್ಟಲೆ ಯುವತಿಯರು ಯೂತ್ ಐಕಾನ್ ಆಗಿದ್ದಾರೆ. ಆದ್ರೆ ಈ ಸಿನಿಮಾ ಅವರ ಲಕ್ಷಾಂತರ ಅಭಿಮಾನಿಗಳು ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಮಾಡಿದೆ… ಕೆಲವರಿಗೆ ಇದು ಓಕೆ ಎನಿಸಬಹುದು” ಎಂದಿದ್ದಾರೆ… ಜೊತೆಗೆ ನಾನು ಓಲ್ಡ್ ಫ್ಯಾಷನ್ಡಾ ಎಂದು ಪ್ರಶ್ನೆ ಮಾಡಿದ್ದಾರೆ…
ಫೆಬ್ರುವರಿ 13 ರಂದು, ಗೆಹ್ರಾಯನ್ ರಿಲೀಸ್ ಆಯ್ತು… ರಿಲೀಸ್ ಆದ ಎರಡು ದಿನಗಳ ನಂತರ, ರೈಲ್ವೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಭಾಸ್ಕರ್ ರಾವ್ ಈ ಸಿನಿಮಾ ವಿರುದ್ಧ ಅಸಮಾಧಾನ ಹೊರಹಾಕಿದರು.. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ… ಕಿಸ್ಸಿಂಗ್ ಸೀನ್ ಗಳು ,, ಅತಿ ಹೆಚ್ಚು ಇಂಟಿಮೇಟ್ ಇಂಟಿಮೇಟ್ ಸೀನ್ ಗಳಲ್ಲಿ ಕಾಣಿಸಿಕೊಂಡಿದ್ದು , ಈ ಸಿನಿಮಾವನ್ನು ಸೋಷಿಯಲ್ ಮೀಡಿಯಲ್ಲಿ ಹೊಗಳೋದಕ್ಕಿಂತ ಹೆಚ್ಚು ತೆಗಳುವವರೇ ಆಗಿದ್ದಾರೆ…