ಭವಾನಿ ರೇವಣ್ಣ ಒಂದು ದಿನ ಎಂಎಲ್ಎ ಆಗೇ ಆಗುತ್ತಾರೆ : ಹೆಚ್ ಡಿ ರೇವಣ್ಣ
ಹಾಸನ : ಭವಾನಿ ರೇವಣ್ಣ ಒಂದು ದಿನ ಎಂಎಲ್ಎ ಆಗೇ ಆಗುತ್ತಾರೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.
ಹಾಸನದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು ವನನ್ನು ಕೇಳಿ ಯಾರೂ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಮೊದಲು ಅವರ ವಿಚಾರ ನೋಡಿಕೊಳ್ಳಲು ಹೇಳಿ. ಇನ್ನು. ಐದು ವರ್ಷ, ಹತ್ತು ವರ್ಷ ಆಗತ್ತೋ ಹೊಳೆನರಸೀಪುರದಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ಕೊಟ್ಟರೆ ನಾನು ಕೆಲಸ ಮಾಡುತ್ತೇನೆ ಎಂದರು.
ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್ ತಪ್ಪಿನಿಂದ, ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇಲ್ಲ ಅಂದರೆ ಈ ವ್ಯಕ್ತಿ ಎಲ್ಲಿ ಇರುತ್ತಿದ್ದ. ಈಗೇನು ಆಟ ಆಡುತ್ತಿದ್ದಾರೆ. 2023ಕ್ಕೆ ನಾವೇನು ಅಂತ ತೋರಿಸುತ್ತೇವೆ. ಎಂದು ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಮ್ ಗೌಡ ವಿರುದ್ಧ ಕಿಡಿಕಾರಿದ್ದಾರೆ.
ಅಲ್ಲದೇ ನಾನು ಅವನ್ನು ಲೆಕ್ಕಕ್ಕೆ ಇಟ್ಟಿಲ್ಲ, ಅವರು ದೊಡ್ಡ ವ್ಯಕ್ತಿ. ಅವರ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ಅವರು ಯಡಿಯೂರಪ್ಪ ಅವರ ಮಗನ ಜತೆ ಓದಿ ಬಂದಿರುವವರು. ಅವರು ದೊಡ್ಡವರು. ದಿನ ಅವರ ಮನೆಯಲ್ಲಿ ದಲಿತರಿಗೆ ಊಟ ಹಾಕುತ್ತಿದ್ದಾರೆ. ಮೀಸಲಾತಿ ಇಲ್ಲದಿದ್ದಾಗ ಅಧಿಕಾರ ಕೊಟ್ಟಿರುವ ಪಕ್ಷ ಯಾವುದಾದರೂ ಇದ್ದರೆ ಅದು ದೇವೇಗೌಡರ ಪಕ್ಷ ಎಂದು ಸಮರ್ಥಿಸಿಕೊಂಡರು.
ಅಲ್ಲದೇ ಹಾಸನದ ಈ ಗಿರಾಕಿ ಯಡಿಯೂರಪ್ಪರ ಸರ್ಕಾರ ಬಂದಿದ್ದಕ್ಕೆ ಜೀವ ಉಳಿಸಿಕೊಂಡಿದ್ದಾರೆ. ಇವರ ಯೋಗ್ಯತೆಗೆ ಅಲ್ಪಸಂಖ್ಯಾತರ ಮೇಲೆ ಆರೋಪ ಮಾಡಲು ಹೊರಟಿದ್ದಾರೆ. ನಮ್ಮ ಮನೆಗೆ ಎಷ್ಟು ಜನ ದಲಿತರನ್ನು ಕರೆದುಕೊಂಡು ಬರುತ್ತಾರೋ ಬರಲಿ. ನಾನು ಊಟ ಹಾಕುತ್ತೇನೆ ಎಂದು ಹೇಳಿದರು.
ಅವರು ನಮ್ಮ ಬಗ್ಗೆ ಮಾತನಾಡದಿದ್ದರೆ ಅವರ ಹೊಟ್ಟೆಪಾಡು ನಡೆಯಲ್ಲ. ಯಡಿಯೂರಪ್ಪ ಈ ಜಿಲ್ಲೆಗೆ ಏನು ಕಡಿದು ಕಟ್ಟೆ ಹಾಕಿದ್ದಾರೆ. ನಾನು ಈವರೆಗೂ ತಡೆದಿದ್ದೇನೆ. ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗ ಅಲ್ಲ ಎಂದು ಸೆಡ್ಡ ಹೊಡೆದರು.