bheemasena nala maharaja
ಕೊರೊನಾ ಆತಂಕದ ನಡುವೆಯೇ ಅಕ್ಟೋಬರ್ 15 ರಿಂದ ಚಿತ್ರಮಂದಿರಗಳು ತೆರೆಯಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಅದರಂತೆ ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡುವ ಮೂಲಕ ಸಿನಿಮಾ ಹಾಲ್ ಗಳು ಕಾರ್ಯನಿರ್ವಹಿಸಬಹುದಾಗಿದೆ.

ಆದ್ರೆ ಚಿತ್ರಮಂದಿರಕ್ಕೆ ಅವಕಾಶ ಸಿಕ್ಕರೂ ಹೊಸ ಸಿನಿಮಾಗಳು ಹಾಗೂ ದೊಡ್ಡ ದೊಡ್ಡ ಹೈ ಬಜೆಟ್ ಸಿನೆಮಾಗಳು ಕೂಡ ಬಿಡುಗಡೆ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ.
ಚಿತ್ರಮಂದಿರಕ್ಕೆ ಜನರು ಬರುತ್ತಾರೋ ಇಲ್ಲವೋ ಎಂಬ ಅನುಮಾನದ ಹಿನ್ನೆಲೆ ಚಿತ್ರತಂಡಗಳು ಒಟಿಟಿ ಫ್ಲಾಟ್ ಫಾರ್ಮ್ ಸಿನಿಮಾ ಬಿಡುಗಡೆಗೆ ಉತ್ತಮ ಎಂಬ ನಿರ್ಧಾರಕ್ಕೆ ಬಂದಿರುವಂತೆ ಕಾಣತ್ತೆ.
ಇದೀಗ ‘ಭೀಮಸೇನಾ ನಳಮಹಾರಾಜ’ (bheemasena nala maharaja) ಚಿತ್ರದ ರಿಲೀಸ್ ದಿನಾಂಕ ಘೋಷಿಸಿದ್ದು, ಅಕ್ಟೋಬರ್ 29ಕ್ಕೆ ಅಮೇಜಾನ್ ಪ್ರೈಮ್‌ನಲ್ಲಿ ಚಿತ್ರ ರಿಲೀಸ್ ಆಗಲಿದೆ.

ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ, ಹೇಮಂತ್ ರಾವ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಚಿತ್ರಕ್ಕೆ ಕಾರ್ತಿಕ್ ಸರಗೂರ್ ಆಕ್ಷನ್ ಕಟ್ ಹೇಳಿದ್ದು, ನಾಯಕನಾಗಿ ಅರವಿಂದ್ ಅಯ್ಯರ್ ಕಾಣಿಸಿಕೊಂಡಿದ್ದಾರೆ.
ಇನ್ನೂ ನಾಯಕಿಯರಾಗಿ ಪ್ರಿಯಾಂಕಾ ತಿಮ್ಮೇಶ್ ಮತ್ತು ಆರೋಹಿ ಮಿಂಚಲಿದ್ದಾರೆ.
ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ. ಉಳಿದಂತೆ ಅಚ್ಯುತ್ ಕುಮಾರ್, ವಿಜಯ್ ಚೆಂಡೂರ್ ಸೇರಿದಂತೆ ಹಲವರ ತಾರಾಬಳಗ ಚಿತ್ರದಲ್ಲಿದೆ.

‘ರಾಬರ್ಟ್’ ನ ಹೊಸ ಪೋಸ್ಟರ್ ರಿಲೀಸ್ : ದಚ್ಚು ಲುಕ್ ಗೆ ಅಭಿಮಾನಿಗಳು ಫಿದಾ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







