ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿ ಭೂಮಿ ಪೂಜಾ ಕಾರ್ಯಕ್ರಮ.
ಮಾಂಡವ್ಯ ಮಹರ್ಷಿಗಳು ನೆಲೆಸಿದ್ದ ಪುಣ್ಯಕ್ಷೇತ್ರ ಬೆಂಗಳೂರಿನ ಹಲಸೂರಿನ ದಾಮೋದರ ಮುದಲಿಯಾರ್ ರಸ್ತೆಯಲ್ಲಿ ಶ್ರೀ ರಾಘವೇಂದ್ರ ಬೃಂದಾವನ ಸನ್ನಿಧಿಯ ಭವ್ಯ ಮಂದಿರ ನಿರ್ಮಾಣವಾಗಲಿದ್ದು ಇದರ ಭೂಮಿ ಪೂಜೆ ಇಂದು ಮಾರ್ಚ್ 8, 2026ರ ಬೆಳಗ್ಗೆ 11:30 ರ ವೃಷಭ ಲಗ್ನದಲ್ಲಿ ನೆರವೇರಿತು.
1986 ರಲ್ಲಿ ನಿರ್ಮಾಣವಾಗಿದ್ದ ಹಲಸೂರಿನ ದಾಮೋದರ ಮುದಲಿಯಾರ್ ರಸ್ತೆಯಲ್ಲಿ ಶ್ರೀ ಗುರುಸೇವಾ ಮಂಡಳಿ ವತಿಯಿಂದ ಶ್ರೀ ರಾಘವೇಂದ್ರ ಬೃಂದಾವನ ಸನ್ನಿಧಿ ನಿರ್ಮಾಣವಾಗಿತ್ತು. 40 ವರ್ಷಗಳ ಕಟ್ಟದ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಇತ್ತೀಚೆಗಷ್ಟೇ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ರಾಯರ ಅನುಗ್ರಹದಿಂದ ಭಕ್ತರ ಸಹಕಾರದೊಂದಿಗೆ ಇದೀಗ ನೂತನ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗುತ್ತಿದೆ. ಇದರ ಅಂಗವಾಗಿ ಇಂದು ಭೂಮಿ ಪೂಜೆ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಲಾಯಿತು. ಅವಧಾನಿ ಶ್ರೀ ಗುಂಡಿಬೈಲು ಸುಬ್ರಮಣ್ಯ ಭಟ್ ಹಾಗೂ ಕೃಷ್ಣಮೂರ್ತಿ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಲಾಯ್ತು. ಕಾರ್ಯಕ್ರಮದಲ್ಲಿ ಮಾಜಿ ಪೊಲೀಸ್ ಆಯುಕ್ತ ಶ್ರೀ
ಜ್ಯೋತಿ ಪ್ರಕಾಶ್ ಮಿರ್ಜಿ, ಗುರುಸೇವಾ ಮಂಡಳಿಯ ಅಧ್ಯಕ್ಷರಾದ ವಿ. ಬಿ. ಗೋಪಾಲ ಕೃಷ್ಣ ಹಾಗೂ ಸರ್ವ ಸದಸ್ಯರು ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ರಾಯರ ಭಕ್ತ ಸಮೂಹ ಭಾಗಿಯಾಗಿತ್ತು.
ಧನ್ಯವಾದಗಳೊಂದಿಗೆ
ಶ್ರೀ ಗುರು ಸೇವಾ ಮಂಡಳಿ(ರಿ)
ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿ
ನಂ.9/2, ದಾಮೋದರ ಮುದಲಿಯಾರ್ ರಸ್ತೆ,
ಹಲಸೂರು, ಬೆಂಗಳೂರು -560008
ಮೊಬೈಲ್ : 9902820105