ಮಧ್ಯಪ್ರದೇಶದ ಶಿಕ್ಷಣ ಸಚಿವರ ಸೊಸೆ ಸವಿತಾ ಪರ್ಮಾರ್ ಆತ್ಮಹತ್ಯೆ…
ಮಧ್ಯಪ್ರದೇಶದ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರ ಸೊಸೆ ಸವಿತಾ ಪರ್ಮಾರ್ ಶಾಜಾಪುರ್ ಜಿಲ್ಲೆಯಲ್ಲಿರುವ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
23 ವರ್ಷದ ಸವಿತಾ ಪರ್ಮಾರ ಆತ್ಮಹತ್ಯೆಗೆ ಶರಣಾಗಿರುವುದಾಗಿ ಕುಟುಂಬ ಸದಸ್ಯರು ಖಚಿತ ಪಡಿಸಿರುವುದಾಗಿ ಎ ಎನ್ ಐ ನ್ಯೂಸ್ ಏಜೆನ್ಸಿ ಖಚಿತ ಪಡಿಸಿದೆ. 3 ವರ್ಷಗಳ ಹಿಂದೆಯಷ್ಟೇ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರ ಪುತ್ರ ದೇವರಾಜ್ ಸಿಂಗ್, ಸವಿತಾ ಅವರನ್ನು ವಿವಾಹವಾಗಿದ್ದರು. ಆತ್ಮ ಹತ್ಯೆಗೆ ಆತ್ಮ ಹತ್ಯೆಗೆ ಕೌಟುಂಬಿಕ ಸಮಸ್ಯೆ ಕಾರಣ ಎಂದು ತಿಳಿದುಬಂದಿದೆ. ಆದರೆ ಪೊಲೀಸರು ಯಾವುದನ್ನೂ ಇದುವರೆಗೆ ದೃಡಪಡಿಸಿಲ್ಲ.
ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಳಿಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತ್ಮಹತ್ಯೆ ಪ್ರಕರಣ ನಡೆದಿದ್ದು ತನಿಖೆ ನಡೆಸಲಾಗುತ್ತಿದೆ.
Bhopal: School Education Minister Inder Singh Parmar’s daughter-in-law commits suicide








