Bidar | ಮಾನವೀಯತೆ ಮೆರೆದ ಬಸವಕಲ್ಯಾಣ ಶಾಸಕ
ಬೀದರ್ : ರಸ್ತೆ ಅಪಘಾತದಲ್ಲಿ ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಿ ಬಸವಕಲ್ಯಾಣ ಶಾಸಕ ಶರಣು ಸಲಗಾರ ಮಾನವೀಯತೆ ಮೆರೆದಿದ್ದಾರೆ.
ಬಸವಕಲ್ಯಾಣ ಪಟ್ಟಣ ಸಸ್ತಾಪುರ ಬಂಗ್ಲಾಬಳಿ ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ಯುವಕರು ಗಾಯಗೊಂಡಿದ್ದರು.

ಅದೇ ಸಮಯದಲ್ಲಿ ಆ ರಸ್ತೆಯಲ್ಲಿ ಹೋಗುತ್ತಿದ್ದ ಶಾಸಕರು ಕೂಡಲೇ ಕಾರು ನಿಲ್ಲಿಸಿದ್ದಾರೆ. ಅಲ್ಲದೇ ಸ್ವಂತ ಕಾರಿನಲ್ಲಿಯೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಆ ಮೂಲಕ ಶಾಸಕ ಶರಣು ಸಲಗಾರ ಅವರು ಮಾನವೀಯತೆ ಮೆರೆದಿದ್ದಾರೆ. ಶಾಸಕರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.








