ಮತ್ತು ಬರುವ ಔಷಧ ನೀಡಿ ಕೋತಿಗಳನ್ನ ನೇಣು ಬಿಗಿದು ಕೊಂದ ದುಷ್ಕರ್ಮಿಗಳು…
ಮನುಷ್ಯ ಬರು ಬರುತ್ತಾ ಮೃಗಕ್ಕಿಂತ ಕೀಳಾಗಿ ವರ್ತಿಸುತ್ತಿದಾನೆ, ಮಾನವೀಯತೆಯನ್ನುವುದೇ ನಶಿಸಿ ಹೋದಂತೆ ಆಡುತ್ತಿದ್ದಾನೆ. ಕೋತಿಗಳಿಗೆ ಮತ್ತು ಬರುವ ಔಷಧ ಕೊಟ್ಟು ಮರಕ್ಕೆ ನೇಣು ಬಿಗಿದು ಕೊಂದಿರುವ ಅಮಾನವೀಯ ಘಟನೆಗೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮೂರಾಳ ಗ್ರಾಮದ ಹೊರವಲಯದಲ್ಲಿನ ಮರಗಳಿಗೆ ಕಿರಾತಾಕರು ಕೋತಿಗಳಿಗೆ ಮತ್ತು ಬರುವ ಮದ್ದು ನೀಡಿ ನಂತರ ನೇಣು ಬಿಗಿದು ಕೊಲೆ ಮಾಡಿದ್ದಾರೆ. ನಾಲ್ಕು ಮಂಗಗಳಿಗೆ ನೇಣು ಹಾಕಿ ಹುಚ್ಚಾಟ ಮೇರೆದಿದೆ ಕಿರಾತಕರ ಗ್ಯಾಂಗ್ .
ಕೋತಿಗಳ ಮಾರಣಹೋಮಕ್ಕೆ ಕಾರಣರಾದ ಕಿರಾತರಕನ್ನು ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್ತು ಕಾರ್ಯಕರ್ತರು ನಿಟ್ಟೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ನಂತರ ಸಾವನ್ನಪ್ಪಿದ ಕೋತ್ತಿಗಳಿಗೆ ಅಂತ್ಯಸಂಸ್ಕಾರದ ಮಾಡಿ ವಿ ಎಚ್ ಪಿ ಕಾರ್ಯಕರ್ತರು ಮಾನವಿಯತೆ ಮೆರೆದಿದ್ದಾರೆ.
Bidar : Miscreants Killed Monkeyes by hanging in Bidar balki mooralu village








