Bidar Train – ರೈಲ್ವೆ ಹಳಿಯ ಮೇಲೆ ಅಡ್ಡಲಾಗಿ ನಿಂತಿದ್ದ ಟ್ರಕ್ ಗೆ ಗುದ್ದಿದ ರೈಲು…
ರೈಲ್ವೇ ಹಳಿಯಲ್ಲಿ ರೈಲಿಗೆ ಅಡ್ಡಲಾಗಿ ನಿಂತಿದ್ದ ಟ್ರಕ್ ಒಂದಕ್ಕೆ ವೇಗವಾಗಿ ಬರುತ್ತಿದ್ದ ರೈಲು ಡಿಕ್ಕಿ ಹೊಡೆದ ಘಟನೆ ಬೀದರ್ ನಲ್ಲಿ ನಡೆದಿದೆ. ಪರಿಣಾಮ ಟ್ರಕ್ ಜಖಂ ಆಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಬೀದರ್ ಜಿಲ್ಲೆಯ ಭಾಲ್ಕಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭಾಲ್ಕಿಯಲ್ಲಿ ಲೆವೆಲ್ ಕ್ರಾಸಿಂಗ್‌ನಲ್ಲಿ ಟ್ರಕ್ ನಿಂತಿರುವುದನ್ನು ದೂರದಿಂದಲೇ ನೋಡಿದ ರೈಲು ಚಾಲಕ ರೈಲನ್ನು ನಿಲ್ಲಿಸಲು ಪ್ರಯತ್ನಪಟ್ಟರೂ ರೈಲನ್ನು ಏಕಾಏಕಿ ನಿಲ್ಲಿಸಲು ಕಷ್ಟಸಾಧ್ಯ ವಾಗಿರುವುದರಿಂದ ರೈಲು ಹಳಿಯಮೇಲೆ ನಿಂತಿದ್ ಲಾರಿಯ ಹಿಂಭಾಗಕ್ಕೆ ರೈಲು ಡಿಕ್ಕಿ ಹೊಡೆದು ತಳ್ಳಿಕೊಂಡು ಹೋಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
https://twitter.com/ANI/status/1544913563084795904?ref_src=twsrc%5Etfw%7Ctwcamp%5Etweetembed%7Ctwterm%5E1544913563084795904%7Ctwgr%5E%7Ctwcon%5Es1_&ref_url=https%3A%2F%2Fhosadigantha.com%2Fthe-train-hit-the-truck-that-was-standing-across-the-tracks%2F








