ಬೀದರ್: ಬೀದರ್ ನಲ್ಲಿ ಒಂದೇ ದಿನ ಹೊಸದಾಗಿ ಒಟ್ಟು 38 ಕೊರೊನಾ ಪಾಸಿಟಿವ್ ಕೇಸ್ ಗಳು ವರದಿಯಾಗಿದೆ. ಈ ಮೂಲಕ ಕೋವಿಡ್ ಸೋಂಕಿತರ ಸಂಖ್ಯೆ 4,069ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 46 ಮಂದಿ ಕೊರೊನಾ ಜಯಿಸಿ( ಗುಣಮುಖರಾಗಿ) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 3,192ಕ್ಕೆ ಏರಿಕೆಯಾಗಿದೆ.
ಇನ್ನೂ ಜಿಲ್ಲೆಯಲ್ಲಿ ಈವರೆಗೂ ಒಟ್ಟು 60,322 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದ್ದು, 55,734 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ 519 ಮಂದಿಯ ವರದಿ ಬರುವುದು ಬಾಕಿಯಿದೆ. ಸೋಂಕಿತರ ಪೈಕಿ ಭಾಲ್ಕಿಯಲ್ಲಿ 9, ಔರಾದ್ ನಲ್ಲಿ 8, ಬಸವಕಲ್ಯಾಣದಲ್ಲಿ 8, ಬೀದರ್ ತಾಲ್ಲೂಕಿನಲ್ಲಿ 10, ಹುಮನಾಬಾದ್ ತಾಲ್ಲೂಕಿನಲ್ಲಿ 3 ಕೇಸ್ ಗಳು ಪತ್ತೆಯಾಗಿದೆ.