ಬೈಡನ್ ಡಿಜಿಟಲ್ ಟೀಂನಲ್ಲಿ ಕಾಶ್ಮೀರಿ ಮಹಿಳೆ
ವಾಷಿಂಗ್ಟನ್: ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ತಮ್ಮ ಶ್ವೇತಭವನದ ಡಿಜಿಟಲ್ ತಂಡದಲ್ಲಿ ಕಾಶ್ಮೀರ ಮೂಲದ ಆಯಿಷಾ ಶಾ ಅವರಿಗೆ ಸ್ಥಾನವನ್ನು ನೀಡಿದ್ದಾರೆ.
ವೈಟ್ ಹೌಸ್ ಆಫೀಸ್ ಆಫ್ ಡಿಜಿಟಲ್ ತಂಡದ ಪಾಟ್ರ್ನರ್ ಶಿಪ್ ಮ್ಯಾನೇಜರ್ ಆಗಿ ಆಯಿಷಾ ಅವರನ್ನು ನೇಮಕ ಮಾಡಲಾಗಿದೆ.
ರಾಬ್ ಫ್ಲೆಹರ್ಟಿ ನೇತೃತ್ವದ ಡಿಜಿಟಲ್ ತಂಡದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಸೌದಿ – ಭಾರತ ನಡುವಿನ ವಿಮಾನ ಹಾರಾಟ ಇಂದಿನಿಂದ ಮತ್ತೆ ಆರಂಭ..!
ಭಾರತದ ಕಾಶ್ಮೀರದಲ್ಲಿ ಜನಿಸಿದ ಆಯಿಷಾ, ಅಮೆರಿಕದ ಲೂಯಿಸಿಯಾನದಲ್ಲಿ ಬೆಳೆದಿದ್ದು, ಜೋ ಬೈಡೆನ್ – ಕಮಲಾ ಹ್ಯಾರಿಸ್ ಅವರ ಚುನಾವಣಾ ಪ್ರಚಾರದಲ್ಲಿ ಡಿಜಿಟಲ್ ಪಾಟ್ರ್ನರ್ ಶಿಪ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದರು.
ಆಯಿಷಾ ಪ್ರಸ್ತುತ ಸ್ಮಿತ್ಸೋನಿಯನ್ ಸಂಸ್ಥೆಯಲ್ಲಿ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬೈಡನ್ ರ ಡಿಜಿಟಲ್ ತಂಡದಲ್ಲಿ ಇನ್ನೂ 10 ಮಂದಿಗೆ ವಿವಿಧ ಹುದ್ದೆಗಳನ್ನು ನೀಡಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









