ಉಕ್ರೇನ್ ಬಿಕ್ಕಟ್ಟು ತಪ್ಪಿಸಲು ಪುಟಿನ್ ಬೇಟಿಗೆ ಒಪ್ಪಿಕೊಂಡ ಜೋ ಬಿಡೆನ್
ಉಕ್ರೇನ್ ಬಿಕ್ಕಟ್ಟನ್ನು ತಪ್ಪಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲು ಯುಎಸ್ ಅಧ್ಯಕ್ಷ ಜೋ ಬಿಡೆನ್ ಒಪ್ಪಿಕೊಂಡಿದ್ದಾರೆ. ಈ ಸಭೆಯ ನಡೆಯುವವರೆಗೂ ಪುಟಿನ್ ಉಕ್ರೇನ್ ಮೇಲೆ ದಾಳಿ ಮಾಡುವುದಿಲ್ಲ ಎಂದು ಭರವಸೆ ನೀಡಬೇಕೆಂದು ಬಿಡೆನ್ ಬಯಸಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವಾರದ ಕೊನೆಯಲ್ಲಿ ಇಬ್ಬರೂ ಭೇಟಿಯಾಗಬಹುದು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಶ್ವೇತಭವನದ ಅಧಿಕಾರಿಯೊಬ್ಬರು ಮಾತನಾಡಿ ಈ ಸಭೆಯ ಸಮಯ ಮತ್ತು ಸಮಸ್ಯೆಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದಿದ್ದಾರೆ.
ಇನ್ನೊಬ್ಬ ಅಧಿಕಾರಿ ಇಂಥಹ ಸಾಧ್ಯತೆಯನ್ನ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಅಧ್ಯಕ್ಷ ಬಿಡೆನ್ ರಷ್ಯಾ ಮತ್ತು ಉಕ್ರೇನ್‌ನಲ್ಲಿನ ಪರಿಸ್ಥಿತಿಯನ್ನು ಜಿ 7 ನಾಯಕರೊಂದಿಗೆ ಚರ್ಚಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
Biden ready to meet Putin conditionally: Said- Russia should not attack Ukraine; US alert – Americans should be ready to leave Moscow, risk of attack








