ದೀಪಾವಳಿಯಿಂದ 5G ಸೇವೆ ಪ್ರಾರಂಭ – ರಿಲಯನ್ಸ್ ಜಿಯೋ ಘೋಷಣೆ..
ದೇಶದಲ್ಲಿ 5G ಸೇವೆಗಳನ್ನು ಪ್ರಾರಂಭಿಸಲು ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಈ ಮಧ್ಯೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ರಿಲಯನ್ಸ್ ಜಿಯೋದ 5G ಸೇವೆಗಳನ್ನು ಈ ದೀಪಾವಳಿಯಿಂದ ಅಂದರೆ ಅಕ್ಟೋಬರ್ 24 ರಿಂದ ಪ್ರಾರಂಭಿಸಲಾಗುವುದು ಎಂದು ಘೋಷಿಸಿದ್ದಾರೆ.
ಆರಂಭದಲ್ಲಿ, ಈ ಸೇವೆಗಳನ್ನು ದೇಶದ ಆಯ್ದ ನಗರಗಳಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ರಿಲಯನ್ಸ್ ಜಿಯೋ ದೇಶಾದ್ಯಂತ 5G ನೆಟ್‌ವರ್ಕ್ ನಿರ್ಮಿಸಲು 2 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಸ್ಪೆಕ್ಟ್ರಮ್ ಹರಾಜಿನಲ್ಲಿ ರಿಲಯನ್ಸ್ ಜಿಯೋ ಅತಿ ಹೆಚ್ಚು ಬಿಡ್ ಮಾಡಿದ ಸಂಸ್ಥೆಯಾಗಿತ್ತು.
ಮೊದಲಿಗೆ, ರಿಲಯನ್ಸ್ ಜಿಯೋ ನಾಲ್ಕು ಮೆಟ್ರೋ ನಗರಗಳಲ್ಲಿ 5G ಸೇವೆಗಳನ್ನು ನೀಡಲಿದೆ ಅದಕ್ಕಾಗಿ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ನಗರಗಳನ್ನ ಆಯ್ಕೆ ಮಾಡಿಕೊಂಡಿದೆ. ಡಿಸೆಂಬರ್ 2023 ರ ವೇಳೆಗೆ ಇಡೀ ದೇಶವನ್ನು ಆವರಿಸುವಂತೆ ಇತರ ನಗರಗಳು ಮತ್ತು ಪಟ್ಟಣಗಳಿಗೆ ತ್ವರಿತವಾಗಿ ವಿಸ್ತರಿಸಲಾಗುವುದು ಎಂದು ‘ರಿಲಯನ್ಸ್ AGM 2022 ಸಭೆಯಲ್ಲಿ ಮುಖೇಶ್ ಅಂಬಾನಿ ಹೇಳಿದ್ದಾರೆ. ಇದು ವಿಶ್ವದ ಅತಿದೊಡ್ಡ ಸ್ವತಂತ್ರ Jio 5G ಸೇವೆಯಾಗಿದೆ ಎಂದು ಹೇಳಿದರು.