ಬಂದ್ ನಿಂದ ಚಿತ್ರೋದ್ಯಮಕ್ಕೆ ದೊಡ್ಡ ಹೊಡೆತ : ನಿಖಿಲ್ Nikhil saaksha tv
ಚಿಕ್ಕಬಳ್ಳಾಪುರ : ಬಂದ್ ನಿಂದಾಗಿ ಚಿತ್ರೋಧ್ಯಮಕ್ಕೆ ದೊಡ್ಡ ಹೊಡೆತ ಬೀಳುತ್ತದೆ ಎಂದು ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ರೈಡರ್ ಸಿನಿಮಾ ರಿಲೀಸ್ ಹಿನ್ನೆಲೆ ನಿಖಿಲ್ ಕುಮಾರಸ್ವಾಮಿ ಇಂದು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದರು.
ನಗರದ ಬಾಲಾಜಿ ಚಿತ್ರಮಂದರಕ್ಕೆ ಬಂದ ನಿಖಿಲ್, ಅಭಿಮಾನಿಗಳಿಂದ ಸಿನಿಮಾ ವೀಕ್ಷಣೆ ಮಾಡಿದರು.
ಇದಾದ ಬಳಿಕ ಅಭಿಮಾನಿಗಳು ನಿಖಿಲ್ ಅವರನ್ನು ನೋಡಲು ಹಾಗೇ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.
ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಡಿಸೆಂಬರ್ 1 ರಂದು ಕರೆ ಕೊಡಲಾಗಿರುವ ಕರ್ನಾಟಕ ಬಂದ್ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಕೇವಲ ಮಾಧ್ಯಮಗಳಲ್ಲಿ ಗಮನ ಸೆಳೆಯುವ ಉದ್ದೇಶದಿಂದ ಬಂದ್ ಆಗಬಾರದು. ಅದರಿಂದ ಉಪಯೋಗ ಆಗುತ್ತದೆ ಅನ್ನೋದಾದರೆ ಮಾಡಲಿ.
ತಿಂಗಳ ಅಂತ್ಯಕ್ಕೆ ಸಾಕಷ್ಟು ಕನ್ನಡ ಚಲನಚಿತ್ರಗಳು ರೀಲೀಸ್ ಆಗಲಿವೆ. 31 ರ ಬಂದ್ ನಿಂದ ಚಿತ್ರೋಧ್ಯಮಕ್ಕೆ ತುಂಬಾ ಹೊಡೆತ ಬೀಳುತ್ತದೆ. ಜನಕ್ಕೆ ಒಳ್ಳೆಯದಾಗುತ್ತೆ ಅನ್ನೋದಾದ್ರೆ ಬಂದ್ ಮಾಡಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.