ಬಿಎಸ್ ವೈಗೆ ಟೈಂ ಬಾಂಬ್ ಫಿಕ್ಸ್ : ಸಿಎಂ ಬದಲಾವಣೆಗೆ ಬಿಗ್ ಬಾಸ್ ಗಳ ಪ್ಲಾನ್
ಬೆಂಗಳೂರು : ರಾಜ್ಯ ಬಿಜೆಪಿಯ ಒಂಟಿ ಸಲಗ, ಮಾಸ್ ಲೀಡರ್ ಒನ್ ಅಂಡ್ ಓನ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಟೈಂ ಬಾಂಬ್ ಫಿಕ್ಸ್. ಮಾತು ತಪ್ಪದ ರಾಜಾಹುಲಿಗೆ ಇದೀಗ ಧರ್ಮಸಂಕಷ್ಟ ಎದುರಾಗಿದೆ.
ಹೌದು..! ರಾಜ್ಯದಲ್ಲಿ ಬಿಜೆಪಿ ಪಡೆ ಗಟ್ಟಿಯಾಗಿ ನಿಲ್ಲಲು ಬಿ.ಎಸ್.ಯಡಿಯೂರಪ್ಪನವರೇ ಕಾರಣ. ಪಕ್ಷಕ್ಕಾಗಿ ಅವರು ಮಾಡಿದ ಸೇವೆ ಅಷ್ಟಿಷ್ಟಲ್ಲ. ಬಿಜೆಪಿ ಎಂದ್ರೆ ಬಿಎಸ್ ವೈ, ಬಿಎಸ್ ವೈ ಎಂದ್ರೆ ಬಿಜೆಪಿ ಅನ್ನೋ ಮಾತು ಜನಜನಿತವಾಗಿತ್ತು. ರಾಜ್ಯ ಬಿಜೆಪಿ ಮಟ್ಟಿಗೆ ಯಡಿಯೂರಪ್ಪನವರೇ ಸುಪ್ರೀಂ ಆಗಿದ್ದರು. ಆದ್ರೆ ಈಗ ಕಾಲ ಬದಲಾಗಿದಂತೆ ಕಾಣುತ್ತಿದೆ. ಯಾಕೆಂದ್ರೆ ಯಾವ ಪಕ್ಷಕ್ಕಾಗಿ ಬಿಎಸ್ ವೈ ಹಗಲು ರಾತ್ರಿ ದುಡಿದರೋ ಈಗ ಅದೇ ಪಕ್ಷದ ಬಿಗ್ ಬಾಸ್ ಗಳಿಗೆ ಅವರು ಬೇಕಾಗಿಲ್ವಾ ಅಥವಾ ಬೇಡವಾಗಿದ್ದಾರಾ ಅನ್ನೋ ಪ್ರಶ್ನೆ ಎದ್ದಿದೆ.

ಪದೇ ಪದೇ ಟಾರ್ಗೇಟ್ ಆಗ್ತಿದ್ದಾರೆ ಬಿಎಸ್ ವೈ..
ಮೈತ್ರಿ ಸರ್ಕಾರ ಪತನದ ಬಳಿಕ ಆದ ಘಟನೆಗಳನ್ನ ನಾವು ಸೂಕ್ಷ್ಮವಾಗಿ ಗಮಸಿದ್ರೆ ಒಂದು ವಿಚಾರ ಸ್ಪಷ್ಟವಾಗಿ ಕಾಣುತ್ತಿದೆ. ಅದು ಬಿಜೆಪಿಯ ಬಿಗ್ ಬಾಸ್ ಗಳಿಗೆ ಈಗ ಬಿಎಸ್ ವೈ ಬೇಡವಾಗಿರೋದು. ಅದಷ್ಟು ಬೇಗ ಬಿಎಸ್ ವೈ ಅವರನ್ನು ಮೂಲೆಯಲ್ಲಿ ಕೂರಿಸಬೇಕು ಅನ್ನೋ ಪ್ರಯತ್ನಗಳು ನಡೆಯುತ್ತಲೇ ಇವೆ. ಮೈತ್ರಿ ಸರ್ಕಾರ ಪತನದ ಬಳಿಕ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಬಿಎಸ್ ವೈಗೆ ಹೈಕಮಾಂಡ್ ಸೂಚನೆ ನೀಡಲಿಲ್ಲ. ಅಳೆದುತೂಗಿ ಬೇರೆ ದಾರಿ ಕಾಣದೇ ಅವರಿಗೆ ಸಿಎಂ ಪಟ್ಟ ಕಟ್ಟಿದರು. ಇದಾಗ ಬಳಿಕ ಸುಮಾರು ದಿನಗಳ ಕಾಲ ಸಂಪುಟ ರಚನೆಗೆ ಅವಕಾಶ ನೀಡಿದೇ, ಸತಾಯಿಸಿದರು. ಈ ವಿಚಾರವಾಗಿ ಸಿಎಂ ಸಾಕಷ್ಟು ಬಾರಿ ದೆಹಲಿ ದಂಡಯಾತ್ರೆ ಮಾಡಿದ್ರೂ ಯಾವುದೇ ಪ್ರಯೋಜನ ಸಿಗಲಿಲ್ಲ. ಯಾವ ನಾಯಕರೂ ಬಿಎಸ್ ವೈ ಭೇಟಿಗೆ ಅವಕಾಶ ನೀಡಲಿಲ್ಲ. ಇದಾದ ಬಳಿಕ ಸಂಪುಟ ರಚನೆಗೆ ಅವಕಾಶ ನೀಡಿದರೂ ಬಿಎಸ್ ವೈ ಹೇಳಿದ ಅಂದ್ರೆ ಬಿಎಸ್ ವೈ ಕೊಟ್ಟ ಪಟ್ಟಿಗೆ ಕ್ಯಾರೇ ಎನ್ನದೇ ಸೋತ ಲಕ್ಷ್ಮಣ್ ಸವದಿಯನ್ನು ಡಿಸಿಎಂ ಮಾಡಿ ಬೇರೆಯದ್ದೇ ಪಟ್ಟಿಯನ್ನ ಫೈನಲ್ ಮಾಡಿತ್ತು. ಇಲ್ಲಿ ಬಿಎಸ್ ವೈ ಬೇರೆ ಮಾರ್ಗವಿಲ್ಲದೇ ಹೈಕಮಾಂಡ್ ತಲೆಬಾಗಿದ್ರು. ಇದಾಗ ಬಳಿಕ ನೆರೆ ಪರಿಹಾರ ನೀಡದೇ ಸತಾಯಿಸಿತು. ಬಳಿಕ ನಡೆದ ಸಂಪುಟ ವಿಸ್ತರಣೆಯಲ್ಲೂ ಬಿಎಸ್ ವೈ ಮಾತಿಗೆ ಸೊಪ್ಪಾಕಲಿಲ್ಲ. ಜಿಎಸ್ ಟಿ ಪಾಲನ್ನೂ ಕೊಡಲಿಲ್ಲ. ನಿನ್ನೆ ನಡೆದ ಸಂಪುಟ ವಿಸ್ತರಣೆಯಲ್ಲೂ ಬಿಎಸ್ ವೈ ಮಾತಿಗೆ ಹೈಕಮಾಂಡ್ ಬೆಲೆ ಕೊಟ್ಟಿಲ್ಲ ಅನ್ನೋದು ಕ್ಲಿಯರ್ ಆಗಿ ಗೊತ್ತಾಗುತ್ತಿದೆ.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಟೈಂ ಬಾಂಬ್ ಫಿಕ್ಸ್ ಮಾಡಿದ್ರಾ ಬಿಗ್ ಬಾಸ್ ಗಳು
ಯಡಿಯೂರಪ್ಪನವರು ಸಿಎಂ ಆಗಿದ್ದಾಗಿನಿಂದಲೂ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿಬರುತ್ತಲೇ ಇವೆ. ಇನ್ನೇನು ಸಿಎಂ ಬದಲಾವಣೆ ಆಗಿಯೇ ಬಿಟ್ಟರು ಅನ್ನೋ ಸಂದರ್ಭಗಳು ಸೃಷ್ಠಿಯಾಗಿದ್ದವು. ದೇಶಕ್ಕೆ ಕೊರೊನಾ ಕಂಟಕ ಎದುರಾಗಿರಲಿಲ್ಲ ಅಂದಿದ್ದರೇ ಇಷ್ಟೊತ್ತಿಗಾಗಲೇ ಬಿಎಸ್ ವೈ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಿದ್ದರು ಎಂದು ಅನೇಕ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಇನ್ನು ಸಿಎಂ ಬದಲಾವಣೆಗೆ ಹೈಕಮಾಂಡ್ ಮನಸ್ಸು ಮಾಡಿರುವುದು ರಹಸ್ಯವಾಗಿ ಏನಿಲ್ಲ, ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಿದೆ ಅಷ್ಟೆ.
ನಿನ್ನೆಯ ಸಂಪುಟ ವಿಸ್ತರಣೆಯನ್ನ ಸೂಕ್ಷ್ಮವಾಗಿ ಗಮನಿಸಿದ್ರೆ ಎಲ್ಲೋ ಒಂದು ಕಡೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಸಲು ಟೈಂ ಬಾಂಬ್ ಫಿಕ್ಸ್ ಮಾಡಿದ್ಯಾ ಅನ್ನೋ ಪ್ರಶ್ನೆ ಮೂಡುತ್ತಿದೆ. ಯಾಕೆಂದ್ರ ಇಷ್ಟು ದಿನ ಯಡಿಯೂರಪ್ಪನವರ ಹಿಂದೆ ಅವರದ್ದೇ ಯಾದ ಬೆಂಬಲಗರ ಪಡೆ ಇರುತ್ತಿತ್ತು. ಅದಕ್ಕೆ ವಲಸಿಗರೂ ಸೇರಿಕೊಂಡು ಬಿಎಸ್ ವೈ ಬೆಂಬಲಿಗರ ಸಂಖ್ಯೆ ಹೆಚ್ಚಾಗಿತ್ತು. ಒಂದು ವೇಳೆ ಬಿಎಸ್ ವೈ ಅವರನ್ನು ಕೆಳಗಿಳಿಸಿದ್ರೆ ಸರ್ಕಾರ ಪತನಗೊಳ್ಳುವ ಅವಕಾಶಗಳೇ ಹೆಚ್ಚಾಗಿ ಕಾಣುತ್ತಿದ್ದವು ಹಾಗೂ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಭಾರಿ ಹೊಡೆತ ಬೀಳುತ್ತಿತ್ತು. ಈ ಕಾರಣಕ್ಕಾಗಿ ಹೈಕಮಾಂಡ್ ರಿಸ್ಕ್ ತೆಗೆದುಕೊಳ್ಳಲು ಹೋಗಿರಲಿಲ್ಲ. ಆದ್ರೆ ನಿನ್ನೆ ಸಂಪುಟ ವಿಸ್ತರಣೆ ಗಮನಿಸಿದ್ರೆ, ಹೈಕಮಾಂಡ್ ರಿಸ್ಕ್ ತೆಗೆದುಕೊಳ್ಳದೇ ಯಡಿಯೂರಪ್ಪರನ್ನು ಚಕ್ರವ್ಯೂಹಕ್ಕೆ ನೂಕಿರೋದು ಗೊತ್ತಾಗುತ್ತಿದೆ. ಹೇಗೆಂದ್ರೆ ಇಷ್ಟು ದಿನ ಬಿಎಸ್ ವೈ ಅವರನ್ನೇ ನಂಬಿದ್ದವರಿಗೆ ಸಚಿವ ಸ್ಥಾನ ತಪ್ಪಿಸಿ ಅವರ ದೃಷ್ಟಿಯಲ್ಲಿ ಯಡಿಯೂರಪ್ಪನವರನ್ನು ವಿಲನ್ ಮಾಡುವ ಕೆಲಸ ಮಾಡಿದ್ದಾರೆ. ಇದಲ್ಲದೇ ವಲಸಿಗರಿಗೆ ಸಚಿವಸ್ಥಾನ ತಪ್ಪಿಸಿ ಅವರ ಅಸಮಾಧಾನಕ್ಕೂ ಕಾರಣವಾಗಿದ್ದಾರೆ. ಇದಕ್ಕೆ ನಿದರ್ಶನದಂತೆ ಈಗಾಗಲೇ ಮೂಲ- ವಲಸಿಗರು ಸಿಎಂ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಇದು ಪಕ್ಷದಲ್ಲಿ ಯಡಿಯೂರಪ್ಪನವರ ಪ್ರಭಾವವನ್ನು ಕಡಿಮೆ ಮಾಡಲು ಬಿಗ್ ಬಾಸ್ ಗಳು ಹಾಕಿರುವ ಪ್ಲಾನಾ ಅನ್ನೋ ಪ್ರಶ್ನೆ ಎದ್ದಿದೆ.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಒಟ್ಟಾರೆ ಬಿಎಸ್ ಯಡಿಯೂರಪ್ಪ ಅವರನ್ನು ಕೆಳಗಿಸಲು ಹಠಕ್ಕೆ ಬಿದ್ದಂತಿರುವ ಬಿಜೆಪಿ ಹೈಕಮಾಂಡ್ ನಾಯಕರು, ಹಂತ ಹಂತವಾಗಿ ತಮ್ಮ ತಂತ್ರವನ್ನು ಜಾರಿ ಮಾಡುತ್ತಾ ಸಾಗುತ್ತಿದ್ದಾರೆ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









