Big boss : ಬಿಗ್ ಬಾಸ್ ಮನೆಯಿಂದ ವಿನೋದ್ ಗೊಬ್ಬರಗಾಲ ಔಟ್
ಕಿರುತೆರೆಯ ಮಜಾಭಾರತ ರಿಯಾಲಿಟಿ ಶೋ ಖ್ಯಾತಿಯ ವಿನೋದ್ ಗೊಬ್ಬರಗಾಲ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಇದೀಗ ಬಿಗ್ ಬಾಸ್ ಮನೆಯಲ್ಲಿ ಈ ವಾರದ ಎಲಿಮಿನೇಷನ್ ನಡೆದಿದ್ದು, ವಿನೋದ್ ಗೊಬ್ಬರಗಾಲ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.
ಕಿರುತೆರೆಯ ಮಜಾಭಾರತ ರಿಯಾಲಿಟಿ ಶೋನಿಂದ ಹೆಸರು ಮಾಡಿದ್ದ ವಿನೋದ್ ಗೊಬ್ಬರಗಾಲ ಹಾಸ್ಯ ಕಲಾವಿದನಾಗಿ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಗುರುತಿಸಿಕೊಂಡಿದ್ದರು. ಈ ಕಾರಣದಿಂದಾಗಿಯೇ ದೊಡ್ಮನೆ ಪ್ರವೇಶಿಸಿದ ಗೊಬ್ಬರಗಾಲ ಬಿಗ್ ಬಾಸ್ ಮನೆಯಲ್ಲೂ ಕಮಾಲ್ ಮಾಡಿದ್ದರು.
ಇದೀಗ ಸಾನ್ಯ ಅಯ್ಯರ್ ನಂತರ ವಿನೋದ್ ಗೊಬ್ಬರಗಾಲ ಎಲಿಮಿನೇಷನ್ ಸುಳಿಗೆ ಸಿಲುಕಿ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ.
Big Boss: Vinod Gobbargala is out of the Big Boss house








