RCB ಅಭಿಮಾನಿಗಳಿಗೆ BIG Breaking NEWS
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15ನೇ ಸೀಸನ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಪ್ಲೇ ಆಫ್ಸ್ ನತ್ತ ಮುನ್ನುಗ್ಗುತ್ತಿದೆ.
ಫಾಫ್ ಡುಪ್ಲಸಿಸ್ ನಾಯಕತ್ವದಲ್ಲಿ ಆರ್ ಸಿಬಿ ಸೋಲು ಗೆಲುವುಗಳೊಂದಿಗೆ ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಈ ಸೀಸನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ವರೆಗೂ 12 ಪಂದ್ಯಗಳನ್ನಾಡಿದೆ. ಈ ಪೈಕಿ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಐದು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ 14 ಅಂಕಗಳೊಂದಿಗೆ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಆರ್ ಸಿಬಿ ತಂಡ ಈ ಸೀಸನ್ ನಲ್ಲಿ ಇನ್ನೂ ಎರಡು ಪಂದ್ಯಗಳನ್ನು ಆಡಲಿದೆ. ಈ ಎರಡೂ ಪಂದ್ಯಗಳಲ್ಲೂ ಆರ್ ಸಿಬಿ ಜಯ ಸಾಧಿಸಿದ್ರೆ ನೂರಕ್ಕೆ ನೂರರಷ್ಟು ಅಂತಿಮ ನಾಲ್ಕರ ಘಟ್ಟ ತಲುಪಲಿದೆ.
ಒಂದು ಪಂದ್ಯದಲ್ಲೂ ಗೆದ್ದರೂ ಬೆಂಗಳೂರು ತಂಡಕ್ಕೆ ಪ್ಲೇ ಆಫ್ಸ್ ಚಾನ್ಸ್ ಇದೆ. ಈ ಸೀಸನ್ ನಲ್ಲಿ ಬೆಂಗಳೂರು ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.
ನಾಯಕನ ಬದಲಾವಣೆ, ಜೆರ್ಸಿ ಮಾತ್ರವಲ್ಲದೇ ವಿರಾಟ್ ಕೊಹ್ಲಿ ರನ್ ಗಳಿಸದೇ ಇದ್ದರೂ ತಂಡ ಉತ್ತಮ ಸ್ಥಿತಿಯಲ್ಲಿದೆ.

ಆರ್ ಸಿಬಿಯ ಸ್ಟಾರ್ ಪ್ಲೇಯರ್ ಎ ಬಿಡಿ ವಿಲಿಯರ್ಸ್ ಇಲ್ಲದಿದ್ದರೂ ದೆತ್ ಓವರ್ ಗಳಲ್ಲಿ ತಂಡ ದೊಡ್ಡ ಮೊತ್ತ ಕಲೆ ಹಾಕುತ್ತಿದೆ.
ಬ್ಯಾಟಿಂಗ್, ಬೌಲಿಂಗ್ ನಲ್ಲಿ ಬೆಂಗಳೂರು ತಂಡ ಪ್ರದರ್ಶನ ನೀಡಿದ್ದರೂ, ಆರ್ ಸಿಬಿಯನ್ಸ್ ಎಬಿಡಿ ವಿಲಿಯರ್ಸ್ ಅವರನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಹೀಗೆ ಎಬಿಡಿಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಆರ್ ಸಿಬಿ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಮುಂದಿನ ಸೀಸನ್ ನಿಂದ ಎಬಿಡಿ ವಿಲಿಯರ್ಸ್ ತಂಡದಲ್ಲಿ ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ವಿರಾಟ್ ಹೇಳಿದ್ದಾರೆ. ಇದು ಆರ್ ಸಿಬಿ ಅಭಿಮಾನಿಗಳಗೆ ಸಾಕಷ್ಟು ಖುಷಿಯನ್ನು ಕೊಟ್ಟಿದೆ.
ಅಂದಹಾಗೆ ಕೆಲವು ದಿನಗಳ ಹಿಂದೆಯೇ ಎಬಿಡಿ ವಿಲಿಯರ್ಸ್ ಬೆಂಗಳೂರು ತಂಡ ಸೇರಿಕೊಳ್ಳಲಿದ್ದಾರೆ ಎಂದು ವದಂತಿ ಹರಡಿತ್ತು.
ಅವರು ಆರ್ ಸಿಬಿಯ ಮೆಂಟರ್ ಆಗಲಿದ್ದಾರೆ ಅನ್ನೋ ಮಾತುಗಳು ಕೂಡ ಕೇಳಿಬಂದಿದ್ದವು. ಆದ್ರೆ ಇದೀಗ ಆ ಗಾಳಿ ಸುದ್ದಿ ಅಧಿಕೃತವಾಗಿದೆ.
ಮಿಸ್ಟರ್ ನಾಗ್ಸ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಎ ಬಿಡಿ ಬಗ್ಗೆ ವಿರಾಟ್ ಕೊಹ್ಲಿಗೆ ಪ್ರಶ್ನೆ ಕೇಳಲಾಯ್ತು.
ಆಗ ವಿರಾಟ್ ಕೊಹ್ಲಿ, ಅವರನ್ನ ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದ್ರೆ ಮುಂದಿನ ಸೀಸನ್ ನಿಂದ ಅವರು ತಂಡದಲ್ಲಿ ಇರಲಿದ್ದಾರೆ ಎಂದರು.
ಮೂಲಗಳ ಪ್ರಕಾರ ಎಬಿಡಿ ವಿಲಿಯರ್ಸ್ ಮುಂದಿನ ಸೀಸನ್ ನಿಂದ ಆರ್ ಸಿಬಿ ತಂಡದ ಮೆಂಟರ್ ಆಗುವ ಸಾಧ್ಯತೆಗಳಿವೆ. ಜೊತೆಗೆ ಬ್ಯಾಟಿಂಗ್ ಕೋಚ್ ಕೂಡ ಆಗಬಹುದು. BIG Breaking NEWS for RCB fans








