ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಡಿಸೇಲ್ ಮೇಲಿನ ತೆರಿಗೆಯನ್ನು ಶೇ 21ರಿಂದ 24ಕ್ಕೆ ಏರಿಸಿದೆ. ಇದರಿಂದ ಡಿಸೇಲ್ ಬೆಲೆ 1.59ರೂ. ಹೆಚ್ಚಳವಾಗಲಿದೆ. ಹಾಗೇ ಪೆಟ್ರೋಲ್ ಮೇಲಿನ ದರವನ್ನು ಶೇ 32 ರಿಂದ 35ಕ್ಕೆ ಹೆಚ್ಚಳ ಮಾಡಿರುವುದರಿಂದ ಪೆಟ್ರೋಲ್ ದರದಲ್ಲಿ 1.60ರೂ ಹೆಚ್ಚಳವಾಗುವುದು ಅಂತ ಸಿಎಂ ಹೇಳಿದರು. ಪೆಟ್ರೋಲ್ ಮತ್ತು ಡಿಸೇಲ್ ತೆರಿಗೆ ದರ ಏರಿಸೊ ಮೂಲಕ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಿದ್ದಾರೆ. ಇನ್ನು, ಮದ್ಯದ ಮೇಲಿನ ಹಾಲಿ ಸ್ಲ್ಯಾಬ್ ಅನ್ನು ಶೇ6ರಷ್ಚು ಹೆಚ್ಚಳ ಮಾಡಲಾಗುವುದು ಅಂತ ಬಿಎಸ್ ವೈ ಹೇಳಿದ್ದಾರೆ.