ಮುಂಬೈ: ಪ್ರಸಕ್ತ ಸಾಲಿನ ಐಪಿಎಲ್ ಗೆ ದಿನಗಣನೆ ಆರಂಭವಾಗಿದೆ. ಸದ್ಯದಲ್ಲೇ 2025ರ ಐಪಿಎಲ್ (IPL 2025)ನ ಮೆಗಾ ಹರಾಜು ನಡೆಯಲಿದ್ದು, ಅದಕ್ಕೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳಬಹುದಾದ ಹಾಗೂ ಬಿಡುಗಡೆ ಮಾಡಬಹುದಾದ ಆಟಗಾರರ ಪಟ್ಟಿಯನ್ನು ಫ್ರಾಂಚೈಸಿಗಳು ಸಿದ್ಧಪಡಿಸಿಕೊಂಡಿವೆ ಎನ್ನಲಾಗಿದೆ.
ಸದ್ಯದ ಮಾಹಿತಿಯಂತೆ, ಫ್ರಾಂಚೈಸಿಗಳು ರೈಟ್ ಟು ಮ್ಯಾಚ್ (RTM Card) ಸೇರಿದಂತೆ ತಂಡದಲ್ಲಿ 6ಕ್ಕಿಂತ ಹೆಚ್ಚು ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿಸುವುದಿಲ್ಲ ಎಂದೇ ಭಾವಿಸಿವೆ. ಕೆಲ ಫ್ರಾಂಚೈಸಿಗಳು ಆರ್ ಟಿಎಂ ಬಳಕೆ ಸೇರಿದಂತೆ 8 ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿ ಕೇಳಿವೆ.
ಚೆನ್ನೈ ಸೂಪರ್ ಕಿಂಗ್ಸ್ (CSK) ಉಳಿಸಿಕೊಳ್ಳಬಹುದಾದ 5 ಆಟಗಾರರ ಕಿರುಪಟ್ಟಿಯನ್ನು ಸಿದ್ಧಪಡಿಸಿದೆ. ಅದರಲ್ಲಿ ನಾಯಕ ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶಿವಂ ದುಬೆ ಸ್ಥಾನ ಖಚಿತವಾಗಿದೆ. ಇನ್ನುಳಿದಂತೆ ಕೆಲವು ತಂಡಗಳು ಆಟಗಾರರನ್ನು ಕೈ ಬಿಡಲು ಮುಂದಾಗಿವೆ. ಹಿರಿಯ ಆಟಗಾರರನ್ನು ಕೈ ಬಿಡಲಾಗಿದೆ ಎಂಬ ಮಾತು ಕೇಳಿ ಬಂದಿದೆ.
ಮುಂಬೈ ಇಂಡಿಯನ್ಸ್ – ರೋಹಿತ್ ಶರ್ಮಾ, ಲಕ್ನೋ ಸೂಪರ್ ಜೈಂಟ್ಸ್ – ಕೆ.ಎಲ್ ರಾಹುಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು – ಫಾಫ್ ಡು ಪ್ಲೆಸಿಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು – ಗ್ಲೆನ್ ಮ್ಯಾಕ್ಸ್‌ವೆಲ್, ಕೋಲ್ಕತ್ತಾ ನೈಟ್ ರೈಡರ್ಸ್ – ವೆಂಕಟೇಶ್ ಅಯ್ಯರ್ ಅವರನ್ನು ಕೈ ಬಿಡಲು ನಿರ್ಧರಿಸಿವೆ ಎನ್ನಲಾಗಿದೆ.








