ಹಾಸನ: ತಾಯಿ ಹಾಗೂ ಇಬ್ಬರು ಮಕ್ಕಳು ನಿಗೂಢವಾಗಿ ಸಾವನ್ನಪ್ಪಿದ್ದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಸದ್ಯ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ನೂತನ ವರ್ಷದ ಆಚರಣೆಗೆ ಪ್ರಿಯಕರನನ್ನು ಕರೆಯಿಸಿ, ತಾನೇ ಹತ್ಯೆಯಾಗಿದ್ದಾಳೆ ಎಂಬುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ದಾಸರಕೊಪ್ಪಲಿನ ಶಿವಮ್ಮ ಹಾಗೂ ಆಕೆಯ ಮಕ್ಕಳಾದ ಪವನ್ (10) ಹಾಗೂ ಸಿಂಚನ (7) ನಗರದಲ್ಲಿನ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಸದ್ಯ ಪೊಲೀಸರ ತನಿಖೆಯಿಂದ ಆಕೆಯ ಪ್ರಿಯಕರನೇ ಕೊಲೆ ಮಾಡಿದ್ದಾನೆ ಎಂಬುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಮೂಲದ ಆರೋಪಿ ನಿಂಗಪ್ಪ ಕಾಗವಾಡಿ (36)ಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜಾಪುರದಲ್ಲಿ (Bijapur) ಶಿವಮ್ಮಳ ಪತಿ ತೀರ್ಥಪ್ರಸಾದ್ ಬೇಕರಿ ನಡೆಸುತ್ತಿದ್ದರು. ಈ ಸಮಯದಲ್ಲಿ ಶಿವಮ್ಮಳಿಗೆ ನಿಂಗಪ್ಪ ಪರಿಚಯವಾಗಿದ್ದ. ನಂತರ ಶಿವಮ್ಮಳ ಪತಿ ತುಮಕೂರಿನಲ್ಲಿ ಬೇಕರಿ ಮಾಡಿಕೊಂಡು ಅಲ್ಲಿಯೇ ಇದ್ದರು. ಆಗ ನಿಂಗಪ್ಪ ಮಹಿಳೆಯೊಂದಿಗೆ ಸಲುಗೆ ಬೆಳೆಸಿಕೊಂಡು ಮನೆಗೆ ಬಂದು ಹೋಗುತ್ತಿದ್ದ. ಮನೆಯಲ್ಲಿ ನಿಂಗಪ್ಪನನ್ನು ಕಾರು ಚಾಲಕ ಎಂದು ಮಹಿಳೆ ಪರಿಚಯ ಮಾಡಿಕೊಟ್ಟಿದ್ದಳು ಎನ್ನಲಾಗಿದೆ. ಮನೆ ಕೂಡ ಹೊಸ ವರ್ಷದ ಆಚರಣೆಗೆ ಮನೆಗೆ ಕರೆಯಿಸಿದ್ದಳು. ಆರೋಪಿ ಡಿ.31ರ ರಾತ್ರಿ ಮಹಿಳೆಯ ಮನೆಯಲ್ಲಿಯೇ ಇದ್. ಜ.1ರ ಸಂಜೆ ಮನೆಗೆ ಬರುವುದಾಗಿ ಪತ್ನಿ ಶಿವಮ್ಮಗೆ ಪತಿ ಹೇಳಿದ್ದಾರೆ.
ಈ ವಿಚಾರ ಗೊತ್ತಾಗಿ ಆರೋಪಿ ಶಿವಮ್ಮನನ್ನು ಕತ್ತುಹಿಸುಕಿ ಕೊಂದು ನಂತರ ಇಬ್ಬರು ಮಕ್ಕಳನ್ನು ಕತ್ತುಹಿಸುಕಿ ಕೊಲೆಗೈದಿದ್ದ. ನಂತರ ಅನಿಲ ಸೋರಿಕೆಯಿಂದ ಹೀಗಾಗಿದೆ ಎಂದು ಬಿಂಬಿಸಿದ್ದ ಎನ್ನಲಾಗಿದೆ. ಅಲ್ಲದೇ, ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರ, ತಾಳಿ, ಕಾಲು ಚೈನು, ಮೊಬೈಲ್ ದೋಚಿ ಹೊರಗಡೆಯಿಂದ ಡೋರ್ ಲಾಕ್ ಮಾಡಿ ಪರಾರಿಯಾಗಿದ್ದ. ಪತಿ ಮಾರನೇ ದಿನ ಬಂದಾಗ ಈ ಪ್ರಕರಣ ಬಯಲಿಗೆ ಬಂದಿತ್ತು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.








