ಕನ್ನಡ ರ್ಯಾಪರ್ ಹಾಡುಗಳ ಖ್ಯಾತಿಯ ಚಂದನ್ ಶೆಟ್ಟಿ ಹಾಗೂ ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಇಂದು ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಾಂಸ್ಕøತಿಕ ನಗರಿ ಮೈಸೂರಿನ ಹಿನಕಲ್ ಸ್ಪೆಕ್ಟ್ರಾ ಕಲ್ಯಾಣ ಮಂಟಪದಲ್ಲಿ ನಡೆದ ಅದ್ದೂರಿ ವಿವಾಹ ಕಾರ್ಯಕ್ರಮದಲ್ಲಿ ಬೆಳಗ್ಗೆ 8.15 ರಿಂದ 9 ಗಂಟೆ ರವರೆಗಿನ ಮೀನ ಲಗ್ನದಲ್ಲಿ ಚಂದನ್ ಶೆಟ್ಟಿ ನಿವೇದಿತಾಗೆ ಮಾಂಗಲ್ಯಧಾರಣೆ ಮಾಡಿದ್ದಾರೆ. ಇದೇ ವೇಳೆ ನಿವೇದಿತಾ ಪೋಷಕರಾದ ಹೇಮ ಮತ್ತು ರಮೇಶ್, ಚಂದನ್ಶೆಟ್ಟಿ ಪೋಷಕರಾದ ಪ್ರೇಮಲತಾ ಹಾಗೂ ಪರಮೇಶ್ ಹಾಗೂ ಮದುವೆಗೆ ಆಗಮಿಸಿದ್ದ ಬಂಧು ಮಿತ್ರರು, ಸ್ನೇಹಿತರು ನವದಂಪತಿಗಳಿಗೆ ಹರಸಿ ಆಶೀರ್ವದಿಸಿದ್ದಾರೆ.
ನಿನ್ನೆ ರಾತ್ರಿ ನಡೆದ ಆರತಾಕ್ಷತೆ ಕಾರ್ಯಕ್ರಮದಲ್ಲಿ ರಾಜಕೀಯ ಹಾಗೂ ಸ್ಯಾಂಡಲ್ವುಡ್ನ ಅನೇಕ ಗಣ್ಯರು ಪಾಲ್ಗೊಂಡು ನವ ಜೋಡಿಗೆ ಆಶೀರ್ವದಿಸಿ ಶುಭಹಾರೈಸಿದ್ರು.








