BIGG BOSS 8 : ಮತ್ತೆ ನಿರ್ಮಲಾ ವಿರುದ್ಧ ಅಧಿಕಪ್ರಸಂಗತನದ ಆರೋಪ ಮಾಡಿದ ಚಂದ್ರಕಲಾ..! ಕಾರಣ..?
ನಿರ್ಮಲಾ ಒಂದು ರೀತಿ ಮನೆಯ ಎಲ್ಲಾ ಸದಸ್ಯರಿಂದಲೂ ಬಿಗ್ ಬಾಸ್ ಸೀಸನ್ 8 ಆರಂಭವಾದಾಗಿನಿಂದಲೂ ಟಾರ್ಗೆಟ್ ಆಗಿರುವಂತೆ ಕಾಣುತ್ತೆ. ಇದಕ್ಕೆ ಅವರ ವಿಭಿನ್ನ ನಡವಳಿಕೆಯೂ ಕಾರಣವಿರಬಹುದು. ಆದ್ರೆ ಇತ್ತೀಚೆಗೆ ಚಂದ್ರಕಲಾ ಹಾಗೂ ನಿರ್ಮಲಾ ನಡುವೆ ಜಗಳ ತಾರಕಕ್ಕೇರುತ್ತಿದೆ. ಅದ್ರಲ್ಲೂ ವಿಸೇಷವಾಗಿ ಅಡುಗೆ ಮನೆಯ ವಿಚಾರವಾಗಿ ಇಬ್ಬರ ನಡುವಿನ ಜಡೆ ಜಗಳ ರಂಗೇರುತ್ತಿದೆ. ಹೌದು ಇತ್ತೀಚೆಗೆ ನಿರ್ಮಲಾ ಅಡುಗೆ ಮನೆಯಲ್ಲಿ ಏನೂ ಕೆಲಸ ಮಾಡಲ್ಲ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಎಂದು ಚಂದ್ರಕಲಾ ಗಲಾಟೆ ಮಾಡಿದ್ದರು. ಇದಕ್ಕೆ ತಕ್ಕ ಉತ್ತರ ಕೊಟ್ಟಿದ್ದ ನಿರ್ಮಲಾ ಸಿಕ್ಕಾಪಟ್ಟೆ ಟೆರರ್ ಆಗಿದ್ದರು. ಇನ್ಮುಂದೆ ಕಿಚನ್ ಡಿಪಾರ್ಟ್ ಮೆಂಟ್ ನಂದೇ ನನ್ನ ಅನುಮತಿ ಇಲ್ಲದೇ ಯಾರೂ ಕೂಡ ಒಳಗಡೆ ಬರೋ ಹಾಗಿಲ್ಲ ಅಷ್ಟೇ ಎಂದು ಕೆಂಡ ಕಾರಿದ್ದರು. ನಿರ್ಮಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಮತ್ತೊಮ್ಮೆ ಕಿಚನ್ ವಿಚಾರವಾಗಿಯೇ ಇಬ್ಬರ ನಡುವೆ ಕಿರಿಕ್ ಆಗಿದೆ. ಹೌದು ನಿರ್ಮಲಾ ಅವರ ಬಗ್ಗೆ ಮನೆಯ ಇತರೇ ಸದಸ್ಯರ ಬಳಿ ಅಡುಗೆ ವಿಚಾರವಾಗಿ ದೂರಿದ್ದಾರೆ ಚಂದ್ರಕಲಾ. ನಿರ್ಮಲಾ ಅಡುಗೆಗೆ ತುಂಬ ಎಣ್ಣೆ ಹಾಕ್ತಾರೆ. ಅಡುಗೆ ಮನೆ ಪದಾರ್ಥಗಳನ್ನು ತುಂಬ ವೇಸ್ಟ್ ಮಾಡ್ತಾ ಇದ್ದಾರೆ. ಹೀಗೆ ಮಾಡಬಾರದು ಅವರು. ನೋಡಿ, ಆರು ಬಾಟಲ್ ಅಲ್ಲಿ ಮೂರು ಬಾಟಲಿ ಎಣ್ಣೆ ಖಾಲಿ ಆಗಿದೆ. ಯಾರಪ್ಪನ ಮನೆ ಸ್ವತ್ತು ಇದು. ಒಂದೊಂದು ಪದಾರ್ಥದಲ್ಲೂ ಸಿಕ್ಕಾಪಟ್ಟೆ ಎಣ್ಣೆ ಹಾಕಿರ್ತಾರೆ. ನಾನು ಕೂಡ ಅವರ ಹಾಗೇ ಎಣ್ಣೆ ಸುರಿಯಬಹುದು. ಆಮೇಲೆ 16 ಜನ ಮಣ್ಣು ತಿನ್ನಬೇಕಾಗುತ್ತದೆ. ಸೆನ್ಸ್ ಇಲ್ಲದೇ ಇರೋರ ಥರ ಆಡಬಾರದು. ಇತ್ತ ಚಂದ್ರಕಲಾ ಮಾತನ್ನ ಮನೆಯ ಇತರೇ ಸ್ಪರ್ಧಿಗಳು ಸಹ ಒಪ್ಪಿರುವಂತೆ ಕಂಡುಬಂದಿದೆ.
ಮನೆಯಲ್ಲಿ ಮೊದಲಿನಿಂದಲೂ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿರುವ ನಿರ್ಮಲಾ ವರ್ತನೆ ಅಷ್ಟಾಗಿ ಮನೆಯ ಸ್ಪರ್ಧಿಗಳಿಗೆ ಇಷ್ಟವಾಗುತ್ತಿಲ್ಲ. ಬಿಗ್ ಬಾಸ್ ಮನೆಯಲ್ಲಿ ನಿರ್ಮಲಾ ಚೆನ್ನಪ್ಪ ಅವರ ವರ್ತನೆ ಬಗ್ಗೆ ಅನೇಕ ತಕರಾರುಗಳಿವೆ. ಈ ಹಿಂದೆ ಮಧ್ಯರಾತ್ರಿ ಸೀರೆ ಉಟ್ಟು, ಅವರು ಮೇಕಪ್ ಮಾಡಿಕೊಂಡಿದ್ದು ಸಾಕಷ್ಟು ಸದ್ದು ಮಾಡಿತ್ತು.








