BIGG BOSS 8 : ಕಿಚನ್ ನಂದೇ… ಯಾರು ಬರಂಗಿಲ್ಲಾ ಅಷ್ಟೇ : ಟೆರರ್ ಆದ ನಿರ್ಮಲಾ..! ಚಂದ್ರಕಲಾ ಜೊತೆ ಜಂಗಿ ಕುಸ್ತಿಗೆ ಬಿದ್ದ ನಿರ್ಮಲಾ..!
ಬಿಗ್ ಬಾಸ್ ಮನೆಯಲ್ಲಿ ಸದ್ಯ ನಿರ್ಮಲಾ ಸ್ಪರ್ಧಿಗಳೆಲ್ಲರಿಗೂ ಟಾರ್ಗೆಟ್ ಆಗಿದ್ದಾರೆ. ಇತ್ತೀಚೆಗೆ ಎಲ್ಲರಿಂದಲೂ ಡಿಸ್ ಲೈಕ್ ಪಡೆದಿದ್ದ ನಿರ್ಮಲಾ ತಾಳ್ಮೆಯ ಕಟ್ಟೆ ಒಡೆದಿರುವಂತೆ ಕಾಣ್ತಿದೆ. ಯಾಕಂದ್ರೆ ಇಂದು ರಿಲೀಸ್ ಆಗಿರೋ ಬಿಗ್ ಬಾಸ್ ನಲ್ಲಿ ನಿರ್ಮಲಾ ಸಿಕ್ಕಾಪಟ್ಟೆ ಟೆರರ್ ಆಗಿರೋದು ಕಂಡು ಬಂದಿದೆ. ಬಿಗ್ ಬಾಸ್ ಮನೆಯಲ್ಲಿ ನಿರ್ಮಲಾ ಹಾಗೂ ಚಂದ್ರಕಲಾ ನಡುವೆ ಜಂಗಿ ಕುಸ್ತಿ ಏರ್ಪಟ್ಟಿದೆ. ಸ್ಪಷ್ಟವಾಗಿ ಇವರಿಬ್ಬರ ನಡುವೆ ಯಾಕೆ ಗಲಾಟೆ ಏರ್ಪಟ್ಟಿದೆ ಎಂಬುದು ಗೊತ್ತಿಲ್ಲ. ಆದ್ರೆ ಮನೆಯ ಕೆಲಸಗಳನ್ನ , ಅಡುಗೆ ಮಾಡುವ ವಿಚಾರವಾಗಿ ಜಗಳ ನಡೆದಿರಬಹುದು ಎಂಬುದನ್ನ ಪ್ರೋಮೋ ನೋಡಿದ್ರೆ ಊಹೆ ಮಾಡಿಕೊಳ್ಳಬಹುದು.
Bigg Boss 8 : ನನ್ನ ಪತ್ನಿಗೆ ಕಣ್ಣೀರು ಹಾಕುವುದು ಗೊತ್ತು, ಗನ್ ಹಿಡಿಯೋದು ಗೊತ್ತು..!
ಹೌದು.. ಕಿಚನ್ ವಿಚಾರವಾಗಿ ಗಲಾಟೆ ನಡೆದಿದೆ. ಇಲ್ಲಿ ಚಂದ್ರಕಲಾ ನಿರ್ಮಲಾ ಅವರು ಅಡುಗೆ ಮನೆಯ ಕೆಲಸದ ಜವಾಬ್ದಾರಿ ತೆಗೆದುಕೊಳ್ತಿಲ್ಲ ಎಂದು ಆರೋಪಿಸುತ್ತಿರೋದನ್ನ ನಾವು ಗಮನಿಸಬಹುದು. ಅಷ್ಟೇ ಅಲ್ಲ ಚಂದ್ರಕಲಾ ನಿರ್ಮಲಾರ ಕೇರ್ ಫ್ರೀ ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಡೆವಳಿಕೆ ಬಗ್ಗೆಯೂ ಇಲ್ಲಿ ಅಸಮಾದಾನವನ್ನ ವ್ಯಕ್ತಪಿಡಿಸಿರೋದು ಪ್ರೋಮೋದಲ್ಲಿ ಗೊತ್ತಾಗ್ತಿದೆ.
ಆದ್ರೆ ಕೆಲ ಕಾಲ ಚಂದ್ರಕಲಾ ಮಾತು ಕೇಳಿಸಿಕೊಳ್ತಿದ್ದ ನಿರ್ಮಲಾ ಧಿಡೀರನೇ ರೊಚ್ಚಿಗೇಳ್ತಾರೆ. ತಕ್ಷಣವೇ ಇನ್ಮುಂದೆ ಕಿಚನ್ ಡಿಪಾರ್ಟ್ ಮೆಂಟ್ ನಂದು. ಯಾರು ನನ್ನ ಅನುಮತಿ ಇಲ್ದೇ ಅಡುಗೆಮನೆಗೆ ಕಾಲಿಡಂಗಿಲ್ಲ ಅಷ್ಟೇ ಎಂದು ಟೆರರ್ ಆಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅಷ್ಟೇ ಅಲ್ದೇ ಕಿಚನ್ ಜವಾಬ್ದಾರಿಯನ್ನ ತಕ್ಷಣವೇ ತೆಗೆದುಕೊಂಡಿದ್ದಾರೆ. ಇದರ ಸಂಪೂರ್ಣ ಎಪಿಸೋಡ್ ನೋಡೋದಕ್ಕೆ ಸಂಜೆ ವರೆಗೂ ಕಾಯಬೇಕಾಗಿದೆ. ಒಟ್ನಲ್ಲಿ ಬಿಗ್ ಬಾಸ್ ನ 8ನೇ ಆವೃತ್ತಿ ಸಾಕಷ್ಟು ರೋಚಕತೆಗಳನ್ನ ಪಡೆದುಕೊಳ್ತಾಯಿದ್ದು, ಬಿಗ್ ಬಾಸ್ ಮನೆಯೊಳಗಡೆ ಸ್ಪರ್ಧಿಗಳ ಪೇಚಾಟ ಜನರಿಗೆ ಮಸ್ತ್ ಎಂಟರ್ ಟೈನ್ ಮಾಡ್ತಿದೆ.
BIGG BOSS 8 : ಜೈಲು ಸೇರಿದ ಮೊದಲ ಸ್ಪರ್ಧಿ ಧನುಶ್ರೀ..! ಕೇವಲ ಗಂಜಿ ಕುಡಿಯುವ ಶಿಕ್ಷೆ..!








