ಧಾರವಾಡದ ಹುಡುಗ ವಿಶ್ವನಾಥ್ ಹಾವೇರಿ ಬಿಗ್ ಬಾಸ್ ಮನೆಯ ಅತಿ ಕಿರಿಯ ಸದಸ್ಯ..!
ಇಂದಿನಿಂದ ಬಿಗ್ ಬಾಸ್ ಶೋ ನಲ್ಲಿ 100 ದಿನಗಳ ಆಟ ಶುರುವಾಗಲಿದೆ. ಈಗಾಗಲೇ 17 ಸ್ಪರ್ಧಿಗಳು ದೊಡ್ಮನೆ ಸೇರಾಗಿದೆ. ಹಾಗಾದ್ರೆ 4ನೇ ಸ್ಪರ್ಧಿಯಾಗಿ ಮನೆಗೆ ಎಂಟ್ರಿ ಕೊಟ್ಟ ವಿಶ್ವನಾಥ್ ಹಾವೇರಿ. ಹಿನ್ನೆಲೆ ಏನು..?
ಮಧುರ ಕಂಠದಿಂದ ತನ್ನ ಅದ್ಭುತ ಗಾಯನದಿಂದ ಹಾಡು ಕರ್ನಾಟಕ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿದ್ದ ಗಾಯಕ ಧಾರವಾಡದ ಹುಡುಗ ವಿಶ್ವನಾಥ್ ಹಾವೇರಿ. ಹಾಡಿನ ಮೂಲಕ ಜನಮನ ಗೆದ್ದಿದ್ದ ಈತ ಈಗ ಬಿಗ್ ಬಾಸ್ ನಲ್ಲಿ ಕಮಾಲ್ ಮಾಡ್ತಾನಾ. ನೋಡ್ಬೇಕಾಗಿದೆ. ಇನ್ನೂ ಈತ ಮನೆಗೆ ಅತಿ ಕಿರಿಯ ಸದಸ್ಯನೂ ಹೌದು. ಇವರಿಗೆ ಈಗಿನ್ನೂ 19 ವರ್ಷವಷ್ಟೇ. ವಿಶ್ವನಾಥ್ ಚಿಕ್ಕ ವಯಸ್ಸಿನಲ್ಲಿಯೇ ಹಿಂದುಸ್ತಾನ ಸಂಗೀತ ಕಲಿಯಲು ಆರಂಭಿಸಿದ್ದರು. ಹಾಡು ಬರೆದು, ಸಂಯೋಜನೆ ಮಾಡುವ ಸಾಮರ್ಥ್ಯ ವಿಶ್ವನಾಥ್ ಅವರಿಗಿದೆ. ಸಾಲದಕ್ಕೆ ಒಂದು ಬ್ಯಾಂಡ್ ಕೂಡ ಹೊಂದಿದ್ದಾರೆ ವಿಶ್ವನಾಥ್.








