ಬಿಗ್ ಬಾಸ್ : ದೊಡ್ಮನೆಗೆ ಸೆಲೆಬ್ರಿಟಿಗಳ ಜೊತೆ ಇಬ್ಬರು ಕಾಮನ್ ಮ್ಯಾನ್ ಗಳ ಎಂಟ್ರಿ ಪಕ್ಕಾ…!
ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಗಾಗಿ ಈಗಾಗಲೇ ಸುದೀಪ್ ಹಾಗೂ ಬಿಗ್ ಬಾಸ್ ಟೀಂ ತಯಾರಿ ನಡೆಸಿದೆ. ಮೂಲಗಳ ಪ್ರಕಾರ ಇದೇ ತಿಂಗಳ ಅಂತ್ಯದೊಳಗೆ ಬಿಗ್ ಬಾಸ್ ಸೀಸನ್ 8 ಕನ್ನಡ ಬರಲಿದ್ದು, ಪ್ರೇಕ್ಷಕರು ಕಾತರದಿಂದ ಕಾಯ್ತಿದ್ದಾರೆ. ಇತ್ತ ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ಯಾರೆಲ್ಲಾ ದೊಡ್ಮನೆ ಎಂಟ್ರಿಯಾಗಬಹುದು. ಕಾಮನ್ ಮ್ಯಾನ್ ಗೆ ಮನೆಯಲ್ಲಿ ಪ್ರವೇಶ ಇದ್ಯಾ… ನಟ, ನಟಿಯರು, ಟಿಕ್ ಟಾಕ್ ಸ್ಟಾರ್ ಗಳು ಮನೆ ಸೇರುತ್ತಾರಾ… ಹೀಗೆಲ್ಲಾ ಕುತೂಹಲಗಳು ಮನೆಮಾಡಿವೆ… ಕೆಲವೊಬ್ಬರ ಹೆಸರುಗಳು ಬಲವಾಗಿಯೇ ಕೇಳಿಬರುತ್ತಿವೆ. ಜೊತೆಜೊತೆಯಲಿ ನಟ ಅನಿರುಧ ಇರಬಹುದು. ಟಿಕ್ ಟಾಕ್ ಸ್ಟಾರ್ ಗಳಾಗಿ ಟ್ರೋಲ್ ಗಳಿಂದಲೇ ಸಿಕ್ಕಾಪಟ್ಟೆ ಫೇಮಸ್ ಆದ ಬಿಂದು ಗೌಡ, ಸೋನು ಗೌಡ ಆಗಿರಬಹುದು, ಜನರಿಗೆ ಕಲರ್ ಕಲರ್ ಕಾಗೆ ಹಾರಿಸಿ ಟ್ರೋಲಿಗರ ಪಾಲಿನ ಆಹಾರವಾದ ಡ್ರೋನ್ ಪ್ರತಾಪ ಇರಬಹುದು ಖ್ಯಾತ ನಿರೂಪಕಿ ರಾಧಾ ಹಿರೇಗೌಡ ಆಗಿರಬಹುದು ಹೀಗೆ ಹಲವರ ಹೆಸರುಗಳು ಈ ಸೀಸನ್ ನಲ್ಲಿ ಕೇಳಿ ಬರುತ್ತಿದೆ.
‘ಮಾಸ್ಟರ್’, ‘ಅವೇಂಜರ್ಸ್’ ರೆಕಾರ್ಡ್ ಳನ್ನೇ ಧೂಳಿಪಟ ಮಾಡಿದ KGF 2 ಟೀಸರ್..!
ಆದ್ರೆ ಈ ಬಾರಿ ಕಾಮನ್ ಮ್ಯಾನ್ ಗೆ ಮನೆಗೆ ಎಂಟ್ರಿ ಇದ್ಯಾ ಇಲ್ವಾ ಅನ್ನೋ ಪ್ರಶ್ನೆಗಳು ಮೂಡಿದೆ. ಹಾಗೆ ನೋಡಿದ್ರೆ. ಕೊರೊನಾ ಹಿನ್ನೆಲೆ ಲೇಟ್ ಆಗಿ ಆರಂಭವಾಗ್ತಿರೋ ಈ ಸೀಸನ್ ನಲ್ಲಿ ಕಾಮನ್ ಮ್ಯಾನ್ ಗೆ ಪ್ರವೇಶವಿಲ್ಲ ಅಂತಾನೆ ಹೇಳಲಾಗ್ತಿತ್ತು,. ಆದ್ರೆ ಇದೀಗ ದೊಡ್ಮನೆಗೆ ಇಬ್ಬರು ಕಾಮನ್ ಮ್ಯಾನ್ ಗಳ ಎಂಟ್ರಿಯಾಗೋದು ಪಕ್ಕಾ ಅನ್ನೋ ಸುದ್ದಿ ಸದ್ಯ ಸಿಕ್ಕಾಪಟ್ಟೆ ಸೌಂಡ್ ಮಾಡ್ತಾಯಿದೆ. ಆದ್ರೆ ಆ ಇಬ್ಬರೂ ಕಾಮನ್ ಮ್ಯಾಮನ್ ಗಳು ಯಾರಿರಬಹುದು ಎಂಬ ಕ್ಯೂರಿಯಾಸಿಟಿ ಎಲ್ಲರಲ್ಲೂ ಮನೆ ಮಾಡಿದ್ದು, ಸದ್ಯ ಶೋ ಶುರುವಾದ ಬಳಿಕವೇ ರಿವೀಲ್ ಆಗಬೇಕಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








