ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ಕ್ಕೆ ದಿನಗಣನೆ ಆರಂಭವಾಗಿದ್ದು, ಸೆ. 29ರಿಂದ ಆರಂಭವಾಗಲಿದೆ.
ಅಲ್ಲದೇ, ಈ ಸೀಸನ್ ನ್ನು ಕೂಡ ಕಿಚ್ಚ ಸುದೀಪ್ (Kiccha Sudeep) ನಡೆಸಿ ಕೊಡಲು ಸಿದ್ಧರಾಗಿದ್ದಾರೆ. ಈ ಕುರಿತು ಪ್ರೋಮೋ ಬಿಡುಗಡೆಯಾಗಿದ್ದು, ಕಿಚ್ ಮಾಸ್ ಡೈಲಾಗ್ ಹೊಡೆದು ಅಭಿಮಾನಿಗಳನ್ನು ರಂಜಿಸಿದ್ದಾರೆ.
ಸುದೀಪ್ ಅವರು ಬಿಗ್ ಬಾಸ್ ಪ್ರೋಮೋದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಭಾರೀ ಡೈಲಾಗ್ ಹೊಡೆದಿದ್ದಾರೆ. 10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೆನೇ ಲೆಕ್ಕ. ಇದು ಹೊಸ ಅಧ್ಯಾಯ ಎಂದು ಸುದೀಪ್ ಮಾಸ್ ಡೈಲಾಗ್ ಹೊಡೆದಿದ್ದಾರೆ. ಸೆ.29ರಿಂದ ಬಿಗ್ ಬಾಸ್ ಶೋ (Bigg Boss Season 11) ಶುರುವಾಗಲಿದೆ ಎಂದು ಕಲರ್ಸ್ ಕನ್ನಡ ತಿಳಿಸಿದೆ.