ಬಿಗ್ ಬಾಸ್ 7ನೇ ವಾರ ಮನೆಯಿಂದ ಆಚೆ ಹೋಗೋರ್ಯಾರು..?
ಬೆಂಗಳೂರು : ಈ ವಾರದ ಎಲಿಮಿನೇಷನ್ ರೌಂಡ್ ಪ್ರತಿವಾರಕ್ಕಿಂತ ತುಂಬಾನೆ ವಿಭಿನ್ನ. ಯಾಕಂದ್ರೆ ಕಿಚ್ಚ ಸುದೀಪ್ ಈ ವಾರ ಎಲಿಮಿನೇಟ್ ಆಗೋರನ್ನ ಟೇಜ್ ಮೇಲೆ ಅನೌನ್ಸ್ ಮಾಡಲ್ಲ. ಇನ್ ಫ್ಯಾಕ್ಟ್ ಈ ವಾರ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯ ನಡೆದಿಲ್ಲ. ಕಾರಣ ಕಿಚ್ಚ ಅವರು ಕೊಂಚ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಹೀಗಾಗಿ ಬಿಗ್ ಬಾಸ್ ಬೇರೆಯದ್ದೇ ಪ್ಲಾನ್ ಮಾಡಿ ಸದಸ್ಯರಿಗೆ ವಿಸೇಷ ಚಟುವಟಿಕೆ ನೀಡಿದ್ದಾರೆ. ಆದ್ರೆ ಎಲಿಮಿನೇಟ್ ಆಗೋದಂತು ಪಕ್ಕಾ… ವಾರಕ್ಕೆ ಒಬ್ಬ ಡೇಂಜರ್ ಝೋನ್ ನಲ್ಲಿರುವ ಸದಸ್ಯರು ಮನೆಯಿಂದ ಆಚೆ ಹೋಗಲೇ ಬೇಕು.. ಅದ್ರಂತೆ ಈ ಬಾರಿ ಯಾರು ಹೋಗಲಿದ್ದಾರೆ. ಎಲಿಮಿನೇಟ್ ಆದೋರನ್ನ ಹೇಗೆ ಅನೌನ್ಸ್ ಮಾಡಲಾಗುತ್ತೆ ಈ ಎಲ್ಲಾ ಕ್ಯೂರಿಯಾಸಿಟಿ ಇದೆ.
ಇದರ ನಡುವೆ ಯಾರು ಹೋಗ್ತಾರೆ ಅನ್ನೋದನ್ನ ನೋಡೋದಾದ್ರೆ ಮೂಲಗಳ ಪ್ರಕಾರ ಹಾಗೇ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರದಲ್ಲಿ ಮುಂಚೂಣಿಯಲ್ಲಿ ಚರ್ಚೆಯಾಗ್ತಿರುವ ಹೆಸರು ಶುಭಾ ಪುಂಜಾ.. ಈ ವಾರ ಶುಭಾ ಪುಂಜಾ ಮನೆಯಿಂದ ಆಚೆ ಹೋಗಬಹುದಾ ಎನ್ನಲಾತಿದೆ. ಆದ್ರೆ ಫೈನಲ್ ಆಗಿ ಇಂದು ಸಂಜೆಯೇ ಗೊತ್ತಾಗಬೇಕಾಗಿದೆ.
ನಾಮಿನೇಟ್ ಆಗಿರುವ ಸ್ಪರ್ಧಿಗಳು
ಶುಭಾ ಪುಂಜಾ
ಮಂಜು ಪಾವಗಡ
ಅರವಿಂದ್
ದಿವ್ಯಾ ಉರುಡುಗ
ದಿವ್ಯಾ ಸುರೇಶ್
ವೈಷ್ಣವಿ
ರಾಜೀವ್
ವಿಶ್ವನಾಥ್ ಹಾವೇರಿ
ಪ್ರಶಾಂತ್ ಸಂಬರಗಿ
ನಿಧಿ ಸುಬ್ಬಯ್ಯ
ರಘು ಗೌಡ
ಈವರೆಗೂ ಎಲಿಮಿನೇಟ್ ಆಗಿರುವ ಸದಸ್ಯರು
ಮೊದಲನೇ ವಾರ ಟಿಕ್ ಟಾಕ್ ಸ್ಟಾರ್ ಧನುಶ್ರೀ
2ನೇ ವಾರ ನಿರ್ಮಲಾ ಚನ್ನಪ್ಪ
3ನೇ ವಾರ ಗೀತಾ ಭಾರತಿ ಭಟ
4ನೇ ವಾರ ಚಂದ್ರಕಲಾ ಮೋಹನ್
5ನೇ ವಾರ ಶಂಕರ್ ಅಶ್ವಥ್
6ನೇ ವಾರ ( ಶಮಂತ್ ಎಲಿಮಿನೇಟ್ ಆಗಿದ್ದರೂ ಕೂಡ ಸೇಫ್ ಆಗಿದ್ದರು ) ವೈಷ್ಣವಿ ತಾವೇ ಸ್ವಿಚ್ಛೆಯಿಂದ ಹೊರನಡೆದರು