ಆಗಸ್ಟ್ ನಲ್ಲಿ Bigg Boss – ಕಾಫಿನಾಡು ಚಂದುಗೆ ಡಿಮ್ಯಾಂಡ್ ಮಾಡಿದ ನೆಟ್ಟಿಗರು…
ಪ್ರತಿಸಾರಿ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭವಾಗುವ ಮುನ್ನ ಭಾಗವಹಿಸುವ ಸ್ಪರ್ಧಿಗಳು ಯಾರು ಎಂಬುದನ್ನು ತಿಳಿಯುವ ಕೌತುಕ ಹೆಚ್ಚಾಗಿರುತ್ತದೆ. ಬಿಗ್ ಬಾಸ್ ಆರಂಭಕ್ಕೂ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಗಳು ಶುರುವಾಗಿರುತ್ತವೆ.
ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದ ವ್ಯಕ್ತಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುತ್ತಾರೆ ಎಂಬುದು ವೀಕ್ಷಕ ಅಂದಾಜು ಹಾಗಾಗಿ ಈ ಬಾರಿ ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಕಾಫಿ ನಾಡು ಚಂದು ಕೂಡ ಚಾನ್ಸ್ ಪಡೆಯಬಹುದು ಎಂದು ಕೆಲವರು ಊಹಿಸಿದ್ದಾರೆ. ಅಷ್ಟೇ ಅಲ್ಲ, ಚಂದುಗೆ ಅವಕಾಶ ಕೊಡಬೇಕು ಎಂದು ನೆಟ್ಟಿಗರು ಪರಮೇಶ್ವರ್ ಗುಂಡ್ಕಲ್ ಬಳಿ ಮನವಿ ಕೂಡ ಮಾಡಿದ್ದಾರೆ.
ಕನ್ನಡದ ಬಿಗ್ ಬಾಸ್ ಈ ಬಾರಿ ಎರಡು ವೇದಿಕೆಗಳಲ್ಲಿ ದರ್ಶನ ಕೊಡಲಿದೆ. ಮೊದಲು Voots ಓಟಿಟಿಯಲ್ಲಿ ಪ್ರಸಾರವಾದರೆ, ಟಿವಿಗಾಗಿಯೇ ಮತ್ತೊಂದು ಶೋ ಚಿತ್ರೀಕರಣ ಮಾಡಲಾಗುವುದು ಎಂದು ಕಲರ್ಸ್ ಕನ್ನಡ ವಾಹಿನಿ ತಿಳಿಸಿದೆ. ಸೀಸನ್ 8 ಯಶಸ್ವಿಯಾಗಿ ಮುಗಿಸಿರುವ ವಾಹಿನಿಯು ಇದೀಗ ಸೀಸನ್ 9ಕ್ಕೆ ಕಾಲಿಟ್ಟಿದೆ.
ಈಗಾಗಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಹೋಗಬಹುದು ಎಂಬ ಚರ್ಚೆ ಶುರುವಾಗಿದೆ. ಚಿಕ್ಕಮಗಳೂರು ಮೂಲದ ಚಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕ ವಿಡಿಯೋಗಳನ್ನು ಹಂಚಿಕೊಂಡು ಅವರು ಫೇಮಸ್ ಆಗಿದ್ದಾರೆ. ತಮ್ಮದೇ ಆದ ಶೈಲಿಯಲ್ಲಿ ಹಲವರಿಗೆ ಬರ್ತ್ಡೇ ವಿಶ್ ಮಾಡುವ ಮೂಲಕ ಅವರು ನೋಡುಗರಲ್ಲಿ ನಗು ಉಕ್ಕಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ವಿಡಿಯೋಗಳು ವೈರಲ್ ಆಗಿವೆ. ಹಾಗಾಗಿ ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ ನೀಡಬೇಕು ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಒತ್ತಾಯಿಸುತ್ತಿದ್ದಾರೆ.