Bigg Boss Kannada: ಬಿಗ್ ಬಾಸ್ ಮನೆಯಿಂದ ಗೊಬ್ಬರಗಾಲ ಔಟ್ – ನೆಟ್ಟಿಗರಿಂದ ಅಭಿಯಾನ…
ಬಿಗ್ ಬಾಸ್ ಮನೆಯಲ್ಲಿ ನಡೆದ ಎಲಿಮಿನೇಷನ್ ಹಲವು ಅಭಿಮಾನಿಗಳಿಗೆ ಆಘಾತ ತಂದಿದೆ. ಕಳೆದ ವಾರ ದೀಪಿಕಾ ದಾಸ್ ಮನೆಯಿಂದ ಎಲಿಮಿನೇಟ್ ಆಗಿದ್ರೂ ಅವರನ್ನ ವಾಪಸ್ ಕರೆತರಲಾಗಿದೆ. ಆದ್ರೀಗ ಬಹಳ ಚನ್ನಾಗಿ ಆಟ ಆಡ್ತಿದ್ದ ವಿನೋದ್ ಗೊಬ್ಬರಗಾಲ ಔಟ್ ಆಗಿರೋದು ಹಲವರ ಕಣ್ ಕೆಂಪಾಗಿಸಿದೆ.
ದೀಪಿಕಾ ದಾಸ್ ಗೆ ಮೂರು ಚಾನ್ಸ್ ನೀಡಲಾಗಿದೆ.. ಬಿಗ್ ಬಾಸ್ ಸೀಸನ್ 7 ರಲ್ಲೂ ಕಾಣಿಸಿಕೊಂಡಿದ್ದರು. ಈ ಬಾರಿ ಮತ್ತೆ ಮನೆ ಪ್ರವೇಶ ಮಾಡಿ ಎಲಿಮಿನೇಟ್ ಆದ್ರೂ ವಾಪಸ್ ಕರೆಸಿಕೊಳ್ಳಲಾಗಿದೆ.. ಅವರಿಗೆ ಹೋಲಿಕೆ ಮಾಡಿದ್ರೆ ವಿನೋದ್ ಅಧ್ಬುತವಾಗಿ ಆಟವಾಡ್ತಿದ್ದಾರೆ.. ಅನೇಕರಿಗೆ ಇಷ್ಟವಾಗಿದ್ರೂ ಕೂಡ ಅವರ ಎಲಿಮಿನೇಷನ್ ಆಗಿರೋದ್ರಿಂದ ನೆಟ್ಟಿಗರು ವಿನೋದ್ ಪರ ಅಭಿಯಾನವನ್ನೇ ಶುರು ಮಾಡಿಬಿಟ್ಟಿದ್ದಾರೆ.
ಕಿರುತೆರೆಯ ಮಜಾಭಾರತ ರಿಯಾಲಿಟಿ ಶೋನಿಂದ ಹೆಸರು ಮಾಡಿದ್ದ ವಿನೋದ್ ಗೊಬ್ಬರಗಾಲ ಹಾಸ್ಯ ಕಲಾವಿದನಾಗಿ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಗುರುತಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲೂ ಗಮನ ಸೆಳೆದಿದ್ದರು.
ಗೊಬ್ಬರಗಾಲ ಎಲಿಮಿನೇಷನ್ನಿಂದ ಮನೆಮಂದಿ, ಫ್ಯಾನ್ಸ್ ಕೂಡ ಶಾಕ್ ಆಗಿದ್ದಾರೆ. ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡ್ತಿದ್ದಾರೆ.
#Badavara Makkalu Belibeku Kannayya ಅಭಿಯಾನಕ್ಕೆ ಸಾಕಷ್ಟು ಮಂದಿ ಸಾಥ್ ನೀಡುತ್ತಾ ವಿನೋದ್ ಮತ್ತೆ ಬಿಗ್ ಬಾಸ್ ಗೆ ವಾಪಸ್ ಕರೆಸಿ ಎಂದು ಆಗ್ರಹಿಸುತ್ತಿದ್ದಾರೆ.
Bigg Boss Kannada: Gobbaragala out of Bigg Boss house