Big boss Kannada : ಕನ್ನಡ ಬಿಗ್ ಬಾಸ್ ಸೀಸನ್ 9 ರ ಫಿನಾಲೆ ಗೆ ಡೇಟ್ ಫಿಕ್ಸ್….
ಕಿಚ್ಚ ಸುದೀಪ್ ನಡೆಸಿಕೊಡುವ ಕನ್ನಡ ಬಿಗ್ ಬಾಸ್ ಸೀಸನ್ 9 ರ ಫಿನಾಲೆ ಗೆ ಡೇಟ್ ಫಿಕ್ಸ್ ಮಾಡಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಇನ್ನು 8 ಮಂದಿ ಉಳಿದಿದ್ದು, ಮುಂದಿನ ವಾರಕ್ಕೆ ಐವರು ಮಾತ್ರ ದೊಡ್ಮನೆಯಲ್ಲಿ ಉಳಿಯಲಿದ್ದಾರೆ. ಈ ವಾರ ಡಬಲ್ ಎಲಿಮಿನೇಷನ್ ಇರುವುದರಿಂದ ಸ್ಪರ್ಧಿಗಳೂ ಆತಂಕಕ್ಕ ಒಳಾಗಿದ್ದಾರೆ.
ಮೂಲಗಳ ಪ್ರಕಾರ ಡಿಸೆಂಬರ್ 31 ಹಾಗೂ ಜನವರಿ 01ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ ಎನ್ನಲಾಗಿದೆ. ನವೆಂಬರ್ 22ರ ಎಪಿಸೋಡ್ ನಲ್ಲಿ ಫಿನಾಲೆಗೆ 8 ದಿನ ಬಾಕಿ ಎಂಬ ಸೂಚನೆ ನೀಡಲಾಗಿದೆ.
ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್, ರಾಕೇಶ್ ಅಡಿಗ ಅರುಣ್ ಸಾಗರ್, ಅಮೂಲ್ಯ ಗೌಡ, ರೂಪೇಶ್ ಶೆಟ್ಟಿ ಮತ್ತು ದಿವ್ಯಾ ಉರುಡುಗ ಸಧ್ಯ ಮನೆಯಲ್ಲಿರುವ ಕಂಟೆಸ್ಟೆಂಟ್ ಗಳು
ಈ ವಾರ ವೈಯಕ್ತಿಕ ಟಾಸ್ಕ್ ಗಳನ್ನ ನೀಡಲಾಸಗಿದ್ದು, ಸದ್ಯ ಈ ರೇಸ್ ನಲ್ಲಿ ಆರ್ಯವರ್ಧನ್ ಗುರೂಜಿ ಅವರು ಮುಂದಿದ್ದಾರೆ. ಬಿಗ್ ಬಾಸ್ ಗೆದ್ದವರಿಗೆ 50 ಲಕ್ಷ ರೂಪಾಯಿ ಹಾಗೂ ಒಂದು ವಿನ್ನಿಂಗ್ ಕಪ್ ಸಿಗಲಿದೆ.
Bigg boss Kannada : Kannada Bigg Boss season 9 finale date fix….