Bigg Boss Kannada : ದೊಡ್ಮನೆಯಲ್ಲಿ ಮಿಡ್ ನೈಟ್ ಎಲಿಮಿನೇಷನ್….
ಬಿಗ್ ಬಾಸ್ ಕನ್ನಡ ಸೀಸನ್ 9 ಫಿನಾಲೆ ಹತ್ತಿರ ಬರುತ್ತಿದ್ದಂತೆ ಪ್ರೇಕ್ಷಕರಿಗೆ ಕುತೂಹಲವೂ ಕಂಟೆಸ್ಟೆಂಟ್ ಗಳಿಗೆ ನಡುಕ ಉಂಟಗುತ್ತಿದೆ. ಬಿಗ್ ಬಾಸ್ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದು 6 ಜನ ಕಂಟೆಸ್ಟಂಟ್ ಗಳು ಮನೆಯೊಳಗಡೆ ಇದ್ದಾರೆ. ಫಿನಾಲೆ ಗೆ ಕೇವಲ 5 ಮಂದಿಗೆ ಮಾತ್ರ ಅವಕಾಶ ಇರುವುದರಿಂದ ಮಿಡ್ ನೈಟ್ ಎಲಿಮಿನೇಷನ್ ಮೂಲಕ ಒಬ್ಬರನ್ನ ಎಲಿಮಿನೇಟ್ ಮಾಡಲಾಗುತ್ತಿದೆ.
ಮಿಡಿ ನೈಟ್ ಎಲಿಮಿನೇಷನ್ ನಲ್ಲಿ ಒಟ್ಟು 6 ಜನರಲ್ಲಿ ಒಬ್ಬರು ಮನೆಯಿಂದ ಹೊರನಡೆದಿದ್ದಾರೆ. ಈ ಸಂಚಿಕೆಯ ಪ್ರೋಮೋ ರಿಲೀಸ್ ಆಗಿದೆ. ಇಂದು (ಡಿಸೆಂಬರ್ 27) ಈ ಎಪಿಸೋಡ್ ಪ್ರಸಾರ ಕಾಣಲಿದೆ.
ಕಳೆದ ವಾರಂತ್ಯದಲ್ಲಿ ನಡೆದಿದ್ದ ಡಬಲ್ ಎಲಿಮಿನೇಷನ್ ನಲ್ಲಿ ಅಮೂಲ್ಯ ಗೌಡ ಹಾಗೂ ಅರುಣ್ ಸಾಗರ್ ಇಬ್ಬರು ಮನೆಯಿಂದ ಮನೆಯಿಂದ ಹೊರ ನಡೆದಿದ್ದರು. ಈ ವಾರ ಒಬ್ಬರು ಮನೆಯಿಂದ ಹೊರ ಹೋಗುವ ಮೂಲಕ ಮನೆಯಲ್ಲಿ 5 ಮಂದಿ ಮಾತ್ರ ಉಳಿದಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳು ಕ್ರೇನ್ನಲ್ಲಿ ನಿಂತು ಕೊಳ್ಳಬೇಕು. ಕ್ರೇನ್ ಕೆಳಗೆ ಹೋಗಿ ಮೇಲೆ ಬರುತ್ತೆ. ಯಾವ ಸ್ಪರ್ಧಿ ಕಾಣುವುದಿಲ್ಲವೊ ಅವರು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದರ್ಥ. ಆರ್ಯವರ್ಧನ್ ಅಥವಾ ರೂಪೇಶ್ ಶೆಟ್ಟಿ ಇಬ್ಬರಲ್ಲಿ ಒಬ್ಬರೂ ಮನೆಯಿಂದ ಹೊರಹೋಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
Bigg Boss Kannada : Mid night elimination in Biggboss….