Bigg boss Kannada: ಈ ವಾರದ ನಾಮಿನೇಟ್ ಆಗಿರುವ ಸ್ಪರ್ಧಿಗಳ ಲಿಸ್ಟ್..!!
ಕಿಚ್ಚ ಸುದೀಪ್ ನಿರೂಪಣೆಯ ನೇತೃತ್ವದಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಸೀಸನ್ 9 ಈ ಗಾಗಲೇ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ದೊಡ್ಮನೆ ಒಳಗೆ ಬಂದಿದ್ದ 18 ಮಂದಿ ಪೈಕಿ ಈಗಾಗಲೇ ಮೂರು ವಾರಗಳಲ್ಲಿ ಮೂವರು ಮನೆಯಿಂದ ಹೊರನಡೆದಾಗಿದೆ.
ಐಶ್ವರ್ಯಾ ಪಿಸ್ಸೆ , ಸೈಕ್ ನವಾಜ್ , ದರ್ಶ್ ಚಂದ್ರಪ್ಪ ಎಲಿಮಿನೇಟ್ ಆಗಿದ್ದು , ನಾಲ್ಕನೇ ವಾರ ಸ್ಪರ್ಧಿಗಳು ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದಾರೆ..
ಈ ವಾರ ಯಾರು ಮನೆಯಿಂದ ಹೊರ ನಡೆಯಲಿದ್ದಾರೆ ಎಂಬ ಕ್ಯೂರಿಯಾಸಿಟಿಯಿದ್ದು , ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಚರ್ಚೆಗಳೂ ನಡೆಯುತ್ತಿದೆ..
ಬಿಗ್ ಬಾಸ್ ಕನ್ನಡ ಸೀಸನ್ 9 ಉತ್ತಮ ಟಿಆರ್ ಪಿ ರೇಟಿಂಗ್ ಗಳನ್ನು ಪಡೆಯುತ್ತಿದೆ. ಬಿಗ್ ಬಾಸ್ ಕನ್ನಡ 9 ಮನೆಯಲ್ಲಿ ಸ್ಪರ್ಧಿಗಳ ಹೈ ಡ್ರಾಮಾ , ಗಾಸಿಪ್ , ಫೈಟಿಂಗ್ ಎಲ್ಲವೂ ಚಾಲ್ತಿಯಲ್ಲಿದೆ..
ದೀಪಿಕಾ ದಾಸ್ ಬಿಗ್ ಬಾಸ್ ಕನ್ನಡ 9 ಮನೆಯ ಹೊಸ ನಾಯಕಿಯಾಗಿದ್ದಾರೆ. ಸ್ಪರ್ಧಿಗಳು ದಿನೇ ದಿನೇ ತಮ್ಮ ಆಟವನ್ನು ಸುಧಾರಿಸಿಕೊಂಡು ಒಬ್ಬರಿಗೊಬ್ಬರು ತೀವ್ರ ಪೈಪೋಟಿ ನೀಡುತ್ತಿದ್ದಾರೆ ಎಂದು ನೆಟಿಜನ್ ಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ನಾಲ್ಕನೇ ವಾರದ ಎಲಿಮಿನೇಷನ್ಗೆ ನಾಮನಿರ್ದೇಶನಗೊಂಡ ಸ್ಪರ್ಧಿಗಳ ಪಟ್ಟಿ..!!
ಆರ್ಯವರ್ಧನ್
ದಿವ್ಯಾ ಉರುಡುಗ
ರೂಪೇಶ್ ಶೆಟ್ಟಿ
ಮಯೂರಿ
ಪ್ರಶಾಂತ್ ಸಂಬರ್ಗಿ
ಕಾವ್ಯ ಶ್ರೀ
ಸಾನ್ಯಾ ಅಯ್ಯರ್
ನೇಹಾ ಗೌಡ..
ಈ 8 ಮಂದಿ ಪೈಕಿ ಈ ಬಾರಿ ಮನೆಯಿಂದ ಹೊರ ನಡೆಯೋದ್ಯಾರು ಎಂಬ ಚರ್ಚೆಗಳು ನಡೆಯುತ್ತಿದೆ..